Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ (Muddenahalli Sathya Sai Grama) ಬುಧವಾರ ಸದ್ಗುರು ಮಧುಸೂದನ ಸಾಯಿರವರ (Sadguru Sri Madhusudan Sai) 44ನೇ ಜನ್ಮ ದಿನೋತ್ಸವದ (Birthday) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಜನ್ಮದಿನಾಚರಣೆ ಪ್ರಯುಕ್ತ ‘ಗೀತಾಸಾರ ಸರಿತ’ ಎಂಬ ಶಿಬಿರ ನಡೆಯಿತು. ಗಾಯಕ ಸುಮಿತ್ ಟಪ್ಪು ‘ಗಾನಾಮೃತ ಸುಧೆ’ ಕಛೇರಿ ನಡೆಸಿಕೊಟ್ಟರು. ‘ಸತ್ಯಶೋಧ’ ಎಂಬ ಸ್ವಯಂ ಸಂದೇಹ ನಿವಾರಣಾ ತಂತ್ರಾಂಶವನ್ನು ಈ ಸಂಧರ್ಭದಲ್ಲಿ ಉದ್ಘಾಟಿಸಲಾಯಿತು. ಸತ್ಯಸಾಯಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ‘ಪ್ರೇಮ ಕುಸುಮಾಂಜಲಿ’ ಎಂಬ ಸಂಗೀತ ಸೇವೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎನ್.ನರಸಿಂಹಮೂರ್ತಿ, ದೇಶ, ವಿದೇಶದ ಭಕ್ತರು ಪಾಲ್ಗೊಂಡಿದ್ದರು.