Home News Chikkaballapur ಸಂತ ಕವಿ ಸರ್ವಜ್ಞ ಜಯಂತಿ

ಸಂತ ಕವಿ ಸರ್ವಜ್ಞ ಜಯಂತಿ

0
Chikkaballapur Sarvagna Jayanthi

Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಕವಿ ಸರ್ವಜ್ಞ ಜಯಂತಿ (Sarvagna Jayanthi) ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ” ಕನ್ನಡ ಸಾಹಿತ್ಯವನ್ನ ತ್ರಿಪದಿಗಳು ಮತ್ತು ವಚನಗಳ ಮೂಲಕ ವಿಶ್ವ ಮಟ್ಟಕ್ಕೆ ಪಸರಿಸಿದ ವ್ಯಕ್ತಿ ಸರ್ವಜ್ಞ. ಅನ್ನಕ್ಕೆ ಮಿಗಿಲಾದುದ್ದು ಯಾವುದು ಇಲ್ಲಾ, ಅನ್ನವೇ ಲೋಕಕ್ಕೆ ಪ್ರಾಣ ಸರ್ವಜ್ಞ’ ಎಂದು ಅನ್ನದ ಮಹತ್ವ ಸಾರಿದ ಮೊದಲಿಗರು ಮತ್ತು ರಾಷ್ಟ್ರಕಂಡ ಶ್ರೇಷ್ಠ ತತ್ವಜ್ಞಾನಿ ಸರ್ವಜ್ಞ. ಇಂತಹ ಮಹಾನ್ ವ್ಯಕ್ತಿಯ ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಗ್ರೇಡ್–2 ತಹಶೀಲ್ದಾರ್ ತುಳಸಿ, ಸಮುದಾಯದ ಮುಖಂಡರಾದ ವಿ.ಸುಶೀಲಾ, ಮಂಜಣ್ಣ, ಆನಂದ್, ಪ್ರೇಮಲೀಲಾ ವೆಂಕಟೇಶ್, ಮುನಿಕೃಷ್ಣ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version