Saturday, July 20, 2024
HomeSidlaghattaಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಗಂಗಮ್ಮ ದೇವಾಲಯದ (Gangamma Temple) ಆವರಣದಲ್ಲಿ ಸೋಮವಾರ ಸಂಜೆ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆ (Sri Satya Sai Sarala Memorial Hospital), ಭಾರತೀಯ ರೆಡ್ ಕ್ರಾಸ್ (Red Cross) ಸಂಸ್ಥೆ ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ (Free Health Camp) ಡಾ.ಫಣೀಂದ್ರ ಅವರು ಮಾತನಾಡಿದರು.

ಜಿಲ್ಲೆಯ ಎರಡು ಅಥವಾ ಮೂರು ಹಳ್ಳಿಗಳಲ್ಲಿ ಹಾಗೂ ನಗರದ ವಾರ್ಡುಗಳಲ್ಲಿ ಪ್ರತಿವಾರವೂ ಸಂಜೆ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದೇವೆ. ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದಲ್ಲದೆ, ಚಿಕಿತ್ಸೆಗೆಂದು ಬರುವ ಎಲ್ಲರಿಗೂ ಆರೋಗ್ಯ ಕಾರ್ಡ್ ಮಾಡಿಕೊಡುತ್ತೇವೆ. ಅದರೊಂದಿಗೆ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಗೆ ಬಂದು ಉಚಿತವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಬಹುದಾಗಿದೆ. ಮಕ್ಕಳ ವೈದ್ಯರು, ಸ್ತ್ರೀರೋಗ ತಜ್ಞರು, ಕಿವಿ ಮೂಗು ಮತ್ತು ಗಂಟಲಿನ ವೈದ್ಯರು, ಕಣ್ಣಿನ ವೈದ್ಯರು ಇದ್ದಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆಗಳು, ದಂತ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಮಂದಿ ಬಿಪಿ ಮತ್ತು ಶುಗರ್ ಗಾಗಿ ಎರಡು ತಿಂಗಳಿಗಾಗುವಷ್ಟು ಮಾತ್ರೆ ಉಚಿತವಾಗಿ ಪಡೆಯುತ್ತಾರೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ರವಿಕುಮಾರ್, ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಗುರುರಾಜ ರಾವ್, ಡಾ.ಪ್ರಿಯಾಂಕ, ಡಾ.ಭಾರ್ಗವಿ, ಡಾ.ದಿವಾಕರ್, ನಗರಸಭೆ ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ, ಗೋಪಾಲ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸುಬ್ಬಣ್ಣ, ಲಕ್ಷ್ಮೀನಾರಾಯಣ, ವೆಂಕಟಾದ್ರಿ, ಶ್ರೀನಾಥ್, ವಸಂತಮ್ಮ, ಬಾಲಕೃಷ್ಣ, ರಂಗಪ್ಪ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES
- Advertisment -

Most Popular

error: Content is protected !!