Chintamani : ನವೆಂಬರ್ 20 ಶನಿವಾರ ಬೆಳಿಗ್ಗೆ 10-30 ರಿಂದ ಸಂಜೆ 3-30 ಗಂಟೆಯವರೆಗೆ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಪೆದ್ದೂರು ಗ್ರಾಮ ಪಂಚಾಯಿತಿಯ ತುಮ್ಮಲಹಳ್ಳಿ ಹಾಗೂ ಯಗವಕೋಟೆ ಗ್ರಾಮ ಪಂಚಾಯಿತಿಯ ಕೊತ್ತಹುಡ್ಯ ಗ್ರಾಮಗಳ ವತಿಯಿಂದ ಚಿಂತಾಮಣಿ ನಗರದ ರೇಷ್ಮೆ ಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ‘ಕೃಷಿ ವಸ್ತು ಪ್ರದರ್ಶನ’ವನ್ನು ತುಮ್ಮಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೃಷಿ ವಸ್ತು ಪ್ರದರ್ಶನದಲ್ಲಿ ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಮಣ್ಣಿನ ಆರೋಗ್ಯ ನಿರ್ವಹಣೆ, ಸಮಗ್ರ ಕೃಷಿ ಬೇಸಾಯ ಪದ್ಧತಿ, ತೋಟಗಾರಿಕೆ ಬೆಳೆಗಳು, ಹಿಪ್ಪುನೇರಳೆ ಬೇಸಾಯ ಹಾಗೂ ರೇಷ್ಮೆ ಹುಳು ಸಾಕಾಣಿಕೆ, ಪಶುಸಂಗೋಪನೆ ಮತ್ತು ಅಜೋಲ ಉತ್ಪಾದನೆ, ಎರೆಹುಳ ಗೊಬ್ಬರ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಹಸಿರು ಮೇವು ರಕ್ಷಣೆ, ಅಣಬೆ ಬೇಸಾಯ, ಕೃಷಿ ಯಂತ್ರೋಪಕರಣಗಳು, ಜೈವಿಕ ಇಂಧನ, ರೇಷ್ಮೆ ಉಪ ಉತ್ಪನ್ನಗಳು, ಆಹಾರ ವಿಜ್ಞಾನ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಪೀಡೆ, ರೋಗಗಳ ನಿರ್ವಹಣೆ, ಜೇನು ಕೃಷಿ ಮತ್ತು ಮೀನುಗಾರಿಕೆ ಕುರಿತು ಅನೇಕ ಮಾಹಿತಿ ನೀಡಲಾಗುವುದು. ರೇಷ್ಮೆ ಕೃಷಿ ಕಾಲೇಜಿನ ಪ್ರಾಧ್ಯಾಪಕರು, ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು, ತಜ್ಞರು, ಪ್ರಗತಿಪರ ರೈತರು, ಖಾಸಗಿ ಕಂಪನಿಯವರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.