Sidlaghatta : ಶಿಡ್ಲಘಟ್ಟ ನಗರದ ಹಲವು ಕಡೆ ಆಗಸ್ಟ್ 31 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶಿಡ್ಲಘಟ್ಟ ಉಪ ಕೇಂದ್ರದಿಂದ ಹೊರಹೋಗುವ ಎಫ್-1 ಲೋಕಲ್ ಮತ್ತು ಎಫ್-12 ಅಶೋಕ ರಸ್ತೆ, 11 ಕೆವಿ ಮಾರ್ಗಗಳಾದ ಟಿಬಿ ರಸ್ತೆ, ದೇಶದಪೇಟೆ, ಉಲ್ಲೂರು ಪೇಟೆ, ಮಯೂರ ಸರ್ಕಲ್, ಬೂದಾಳ, ಸಿ.ಆರ್.ಬಡಾವಣೆ, ಕೆಕೆ ಪೇಟೆ, ಕೋಟೆ ವೃತ್ತ, ಅಶೋಕ ರಸ್ತೆ,ಕನಕ ನಗರ, ಗಾಂಧಿ ನಗರ, ತೈಭಾ ನಗರ, ಇದ್ಲೂಡು ರಸ್ತೆ, ಕೆಇಬಿ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪ್ರದೇಶಗಳಲ್ಲಿ ಮರುವಾಹಕ ಜೋಡಣೆ ಕೆಲಸ ನಿರ್ವಹಿಸುವ ಕಾರಣ ಆಗಸ್ಟ್ 31 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು BESCOM ನ ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.