Chikkaballapur : ಫೆಬ್ರವರಿ 21 ಮತ್ತು ಫೆಬ್ರವರಿ 22 ರಂದು ವಿವಿಧ ಫೀಡರ್‌ಗಳಲ್ಲಿ ನಿರ್ವಹಣೆ ಕಾಮಗಾರಿ ಕೈಗೊಂಡಿರುವ ಕಾರಣ ಚಿಕ್ಕಬಳ್ಳಾಪುರ ನಗರ, ಗುಡಿಬಂಡೆ (Gudibande), ಮತ್ತು ಬಾಗೇಪಲ್ಲಿ (Bagepalli) ತಾಲ್ಲೂಕಿನ ಕೆಲವು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 21
ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಚಿಕ್ಕಬಳ್ಳಾಪುರ ನಗರ, ಬಿ.ಬಿ ರಸ್ತೆ, ಚಾಮರಾಜಪೇಟೆ, ರೈಲ್ವೆ ಸ್ಟೇಷನ್, ಕಾರ್ಖಾನೆ ಪೇಟೆ, ಬಜಾರ್ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 2.30 ರವರೆಗೆ ಬಾಗೇಪಲ್ಲಿ ತಾಲ್ಲೂಕಿನ ನರಸಾಪುರ, ಪೋಲನಾಯಕನಪಲ್ಲಿ, ಬೊಮ್ಮಸಂದ್ರ, ಆಚಗಾನಪಲ್ಲಿ, ಕುಂಟಕಿಂದಪಲ್ಲಿ, ಗುಂಡಂವಾರಿಪಲ್ಲಿ, ಬಾನಲಪಲ್ಲಿ ಹಾಗೂ ಸುತ್ತಮುತ್ತಲಿನಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ, ಜಂಬಿಗೆಮರದಹಳ್ಳಿ, ಗಂಗಾನಹಳ್ಳಿ, ದಿನ್ನೆಮೇಲಿನಹಳ್ಳಿ, ಕಮ್ಮಡಿಕೆ, ರಾಮಕೃಷ್ಣಪುರ, ಗುಂಡ್ಲಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆಬ್ರವರಿ 22
ಫೆಬ್ರವರಿ 22 ರಂದು ವಿದ್ಯುತ್ ವ್ಯತ್ಯಯ: ಚಿಕ್ಕಬಳ್ಳಾಪುರನಗರ, ಬಾಗೇಪಲ್ಲಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಚಿಕ್ಕಬಳ್ಳಾಪುರ ನಗರದ, ಬಿ.ಬಿ ರಸ್ತೆ, ಚಾಮರಾಜಪೇಟೆ, ರೈಲ್ವೆನಿಲ್ದಾಣ, ಕಾರ್ಖಾನೆಪೇಟೆ, ಬಜಾರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬಾಗೇಪಲ್ಲಿ, ದೇವರಗುಡಿಪಲ್ಲಿ, ಪಾತಬಾಗೇಪಲ್ಲಿ, ಪೋತೇಪಲ್ಲಿ, ಕದಿರನ್ನಗಾರಿಪಲ್ಲಿ, ವಡಿಗೆವಾರಿಪಲ್ಲಿಯಲ್ಲಿ ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 2.30 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.