Monday, September 16, 2024
HomeNewsಪ್ಯಾರಾಲಂಪಿಕ್ಸ್ ನಲ್ಲಿ ಭಾರತೀಯ ವಿಶೇಷಚೇತನರ ಸಾಧನೆಯು ಪ್ರೇರಣಾದಾಯಕ

ಪ್ಯಾರಾಲಂಪಿಕ್ಸ್ ನಲ್ಲಿ ಭಾರತೀಯ ವಿಶೇಷಚೇತನರ ಸಾಧನೆಯು ಪ್ರೇರಣಾದಾಯಕ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ತಾಲ್ಲೂಕು ಆಡಳಿತ, ನವಜೀವನ ಸೇವಾ ಸಂಸ್ಥೆ, ಡಾ.ಶಿವಕುಮಾರಸ್ವಾಮೀಜಿ ಸೇವಾ ಸಮಿತಿ, ಮಾತೃಮಡಿಲು ದಿವ್ಯಾಂಗ ಸೇವಾಮಂದಿರ, ಸಕ್ಷಮ, ಗ್ರಾಮಾಂತರ ಟ್ರಸ್ಟ್, ಸೆವೆನ್ ಹಿಲ್ಸ್ ಎಂಟರ್‌ಪ್ರೈಸಸ್, ಸತ್ಯಸಾಯಿ ಅನ್ನಪೂರ್ಣ ಸೇವಾಟ್ರಸ್ಟ್ ಗಳ ಆಶ್ರಯದಲ್ಲಿ ಬುಧವಾರ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಸಮುದಾಯದ ಸಹಭಾಗಿತ್ವದಲ್ಲಿ ಸಮನ್ವಯ ಶಿಕ್ಷಣ ಸಬಲೀಕರಣ ಜಾಗೃತಿ, ದಿವ್ಯಾಂಗರಿಗೆ ವಿವಿಧ ಸವಲತ್ತುಗಳ ವಿತರಣೆ, ಸ್ಪರ್ಧಾ ವಿಜೇತ ವಿಕಲಚೇತನ ಮಕ್ಕಳಿಗೆ ಬಹುಮಾನ ವಿತರಣೆ” ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.

ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತೀಯ ವಿಶೇಷಚೇತನರು ತೋರಿದ ಸಾಧನೆಯು ಅಮೋಘವಾದುದು. ಅಂಗವೈಕಲ್ಯವು ಶಾಪವೆಂದು ಪರಿಗಣಿಸದೇ ತಮ್ಮಲ್ಲಿ ಸುಪ್ತವಾಗಿರುವ ವಿಶೇಷ ಕೌಶಲವನ್ನು ಬಳಸಿಕೊಂಡು ಔನತ್ಯ ಸಾಧಿಸಲು ವಿಶೇಷಚೇತನರು ಪಣ ತೊಡಬೇಕು ಎಂದು ತಿಳಿಸಿದರು.

ವಿಕಲಚೇತನರಲ್ಲಿ ಅಪೂರ್ವವಾದುದನ್ನು ಸಾಧಿಸುವ ಛಲ, ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದಾಗಿದೆ. ವಿಕಲಚೇತನರ ಬಗ್ಗೆ ಅನುಕಂಪ ತೋರುವುದಕ್ಕಿಂತ ಅವಕಾಶಗಳನ್ನು ಕಲ್ಪಿಸುವತ್ತ ಎಲ್ಲರೂ ಮನಸ್ಸು ಮಾಡಬೇಕಿದೆ ಎಂದರು.

ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿ, ಶಿಕ್ಷಣ ಇಲಾಖೆಯು ವಿಕಲಚೇತನ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಪೂರಕವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಪೋಷಕರು ಅಮನ್ವಯಶಿಕ್ಷಣದಡಿ ಅಗತ್ಯ ಶಿಕ್ಷಣ ಕೊಡಿಸಲು ಹಿಂಜರಿಯಬಾರದು ಎಂದರು.

ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾಸಮನ್ವಯಾಧಿಕಾರಿ ಸುಕನ್ಯ ಮಾತನಾಡಿ, ಸರ್ಕಾರವು ವಿಕಲಚೇತನರ ಶಿಕ್ಷಣ, ಉದ್ಯೋಗಗಳಿಗಾಗಿ ನೀಡಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಸಿಗಬಹುದಾದ ಮೀಸಲಾತಿ ಸೌಲಭ್ಯವಬನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದರು.

ಆನೂರು ಗ್ರಾಮಪಂಚಾಯಿತಿ ಸದಸ್ಯ ಬೆಳ್ಳೂಟಿ ಸಂತೋಷ್ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ಮಾಧ್ಯಮಗಳ ಪ್ರಭಾವವು ಉನ್ನತವಾದುದು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದ್ದು ಅಂಗವೈಕಲ್ಯವನ್ನು ಸಾಧನೆಯ ಮೂಲಕ ಮೆಟ್ಟಿನಿಲ್ಲಲು ಸಾಧ್ಯವಿದೆ ಎಂದರು.

ಆನೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷ ವಿಜಯೇಂದ್ರ, ಸಂಪನ್ಮೂಲ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ನವಜೀವನ ಸೇವಾಸಂಘದ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಸಿಆರ್‌ಪಿ ನರಸಿಂಹರಾಜು, ಚಂದ್ರಕಲಾ, ಬಿಐಆರ್‌ಟಿ ಶಿಕ್ಷಕ ಬಿ.ಎಂ.ಜಗದೀಶ್, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ ಮಾತನಾಡಿದರು.

ವಿಕಲಚೇತನ ಮಕ್ಕಳಿಗೆ ವೀಲ್‌ಚೇರ್‌ಗಳನ್ನು ವಿತರಿಸಲಾಯಿತು. ವಿಕಲಚೇತನ ಎಂಬಿಬಿಎಸ್ ವಿದ್ಯಾರ್ಥಿನಿ ಸೌಮ್ಯಾ ಅವರಿಗೆ ಪ್ರತಿಭಾಪುರಸ್ಕಾರ ನಡೆಯಿತು. ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ನಡೆಸಿದ ಭಾಷಣ, ವೇಷಭೂಷಣ, ಭಾಷಣ ಸ್ಪರ್ಧಾವಿಜೇತ ವಿಕಲಚೇತನ ವಿದ್ಯಾರ್ಥಿಗಳಿಗೆ ಬಹುಮಾನ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ನ್ಯೂಟ್ರಿಶನಲ್ ಫುಡ್ ವಿತರಿಸಲಾಯಿತು. ಯುಡಿಐಡಿ ಕಾರ್ಡು, ಮಾಸಾಶನ ಆದೇಶಪ್ರತಿಗಳನ್ನು ವಿತರಿಸಲಾಯಿತು. ಗ್ರಾಮಾಂತರ ಟ್ರಸ್ಟ್ ವತಿಯಿಂದ 20 ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ದತ್ತು ಪಡೆಯಲಾಯಿತು. ವಿಕಲಚೇತನರ ಕುಟುಂಬಗಳಿಗೆ ಫುಡ್ ಕಿಟ್‌ಗಳನ್ನು ವಿತರಿಸಲಾಯಿತು.

ಬಿಆರ್‌ಸಿ ಕೋಆರ್ಡಿನೇಟರ್ ತ್ಯಾಗರಾಜು, ಸಕ್ಷಮ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್, ಸೆವೆನ್ ಹಿಲ್ಸ್ ಎಂಟರ್‌ಪ್ರೈಸಸ್‌ನ ವೆಂಕಟಮೂರ್ತಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿಗಳು, ತಾಲ್ಲೂಕಿನ ವಿಕಲಚೇತನ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!