Wednesday, September 11, 2024
HomeSidlaghattaಬೃಹತ್ ಉಚಿತ ವೈದ್ಯಕೀಯ ಶಿಬಿರ

ಬೃಹತ್ ಉಚಿತ ವೈದ್ಯಕೀಯ ಶಿಬಿರ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ (Bhaktarahalli) ಬಿಎಂವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ರೋಟರಿ ಬೆಂಗಳೂರು ಸೆಂಟಿನಿಯಲ್ (Rotary Bangalore Centennial) ಮತ್ತು ಬಿಎಂವಿ ಎಜುಕೇಷನ್ ಟ್ರಸ್ಟ್ (BMV Education Trust) ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ವೈದ್ಯಕೀಯ ಶಿಬಿರದಲ್ಲಿ (Health Camp) ಬಿಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆ ಮತ್ತು ಫ್ಲೋರೈಡ್ ನೀರಿನಿಂದಾಗುವ ದಂತ ಸಮಸ್ಯೆಗಳು ಅಧಿಕ. ಈ ಸಮಸ್ಯೆಗಳನ್ನು ತಜ್ಞ ವೈದ್ಯರಿಂದ ಪರಿಹರಿಸಲು ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ಆಯೊಜಿಸಿದ್ದೇವೆ ಎಂದು ಅವರು ತಿಳಿಸಿದರು.

 ಭಕ್ತರಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಎಲ್ಲರೂ ಈ ಶಿಬಿರದಲ್ಲಿ ಭಾಗವಹಿಸಿ ಉನ್ನತ ವೈದ್ಯಕೀಯ ತಜ್ಞರಿಂದ ಸಲಹೆ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಕಣ್ಣಿನ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ, ದಂತ ತಪಾಸಣೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ, ಮೂಳೆ ಸವಕಳಿ ಪರೀಕ್ಷೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳಿಗೆ ತಜ್ಞ ವೈದ್ಯರುಗಳು ಪರೀಕ್ಷೆ ಮಾಡಿ ಸಲಹೆಗಳನ್ನು ನೀಡುತ್ತಿರುವರು ಎಂದು ಹೇಳಿದರು.

 ರೋಟರಿ ಬೆಂಗಳೂರು ಸೆಂಟಿನಿಯರ್ ಅಧ್ಯಕ್ಷೆ ಡಾ.ಪದ್ಮಿನಿ ಮಾತನಾಡಿ, ಶಾರದ ಕಣ್ಣಿನ ಆಸ್ಪತ್ರೆ, ಡೆಂಟಲ್ ಕಾಲೇಜ್ ನವರು ನೆರವಾಗಿದ್ದಾರೆ. ಸಿಪ್ಲಾ, ಟೊರೆಂಟ್ ಮುಂತಾದ ಕಂಪೆನಿಗಳವರು ಉಚಿತವಾಗಿ ಔಷಧಿಗಳನ್ನು ನೀಡಿದ್ದರೆ. ಮಕ್ಕಳ ತಜ್ಞರಾದ ಡಾ.ರಮೇಶ್, ಡಾ.ಪ್ರಮೋದ್ ಮಕ್ಕಳನ್ನು ಪರೀಕ್ಷಿಸಿ ಅಗತ್ಯ ಟಾನಿಕ್, ಔಷಧಿ ನೀಡುತ್ತಿದ್ದಾರೆ. ಹೃದಯ ತಜ್ಞೆ ಡಾ.ಅನುಪಮಾ, ದಂತ ವೈದ್ಯ ಡಾ.ಮಹೇಂದ್ರ ಎಂದರು.

ಈ ಸಂದರ್ಭದಲ್ಲಿ 20 ಯೂನಿಟ್ ರಕ್ತ ಸಂಗ್ರಹಣೆ ಆಯಿತು. ಸುಮಾರು 500 ಜನ ಗ್ರಾಮಸ್ಥರು ಚಿಕಿತ್ಸೆ ಪಡೆದರು. 25 ಮಂದಿ ಕಣ್ಣು ಶಸ್ತ್ರ ಚಿಕಿತ್ಸೆಗೆ ಒಳಪಟ್ಟರು.

 ಬಿಎಂವಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ಟ್ರಸ್ಟಿ ಸಂತೆ ನಾರಾಯಣಸ್ವಾಮಿ, ಎಂ.ಟಿ ಸಾಗರ್, ಡಾ.ನಂದೀಶ್ ಹಾಜರಿದ್ದರು. 

 

For Daily Updates WhatsApp ‘HI’ to 7406303366

- Advertisement -
RELATED ARTICLES
- Advertisment -

Most Popular

error: Content is protected !!