Sidlaghatta : ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ-234 ರಲ್ಲಿ ಎರಡು ದ್ವಿ ಚಕ್ರ ವಾಹನಗಳ ನಡುವೆ ಮುಖಾ ಮುಖಿ ಡಿಕ್ಕಿಯಲ್ಲಿ ದ್ವಿ ಚಕ್ರವಾಹನ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದು ಇನ್ನೊಬ್ಬ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಶಿಡ್ಲಘಟ್ಟ ನಗರ ಹೊರವಲಯ ಚಿಂತಾಮಣಿ ಮಾರ್ಗ ಪಂಪ್‌ಹೌಸ್ ಬಳಿ ನಡೆದ ಅಪಘಾತದಲ್ಲಿ ವೀರಾಪುರ ಗ್ರಾಮದ ಹೂವಿನ ವ್ಯಾಪಾರಿ ಮುನಿಯಪ್ಪ(60) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇನ್ನೊಂದು ಬೈಕ್ ನ ಸವಾರನ ಪೂರ್ಣ ವಿವರ ತಿಳಿದಿಲ್ಲ. ಆತನೂ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆಂದು ತಿಳಿದು ಬಂದಿದೆ.
ಮುನಿಯಪ್ಪ ಅವರು ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ಫುಟ್‌ಪಾತ್ ನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು ಬೆಳಗ್ಗೆ ವ್ಯಾಪಾರಕ್ಕೆಂದು ಶಿಡ್ಲಘಟ್ಟಕ್ಕೆ ತೆರಳುತ್ತಿದ್ದು ಶಿಡ್ಲಘಟ್ಟದ ಕಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.