Sidlaghatta : ಕಿಡಿಗೇಡಿಗಳು ಇಟ್ಟ ಬೆಂಕಿಯು ಬೆಳೆದು ನಿಂತು ಫಸಲು ನೀಡುತ್ತಿದ್ದ ಮಾವಿನ ಮರಗಳನ್ನು (Mango Trees Burnt) ಬಲಿತೆಗೆದುಕೊಂಡಿದೆ.
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ (Dibburahalli) ಪೊಲಿಸ್ ಠಾಣೆ ವ್ಯಾಪ್ತಿಯ ಇ-ತಿಮ್ಮಸಂದ್ರ (E Timmasandara) ಗ್ರಾಮ ಪಂಚಾಯಿತಿಯ ಎಸ್.ವೆಂಕಟಾಪುರದ (S Venkatapura) ಮುನಿನರಸಿಂಹಯ್ಯ ಹಾಗೂ ಗೋಪಾಲ್ ಎನ್ನುವವರಿಗೆ ಸೇರಿದ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.
ಸುಮಾರು 12 ಎಕರೆ ಪ್ರದೇಶದಲ್ಲಿ ಮಾವಿನ ಮರಗಳನ್ನು ಹಾಕಿದ್ದು ಫಸಲು ಬಿಡುತ್ತಿವೆ. ಯಾರೋ ಕಿಡಿಗೇಡಿಗಳು ಜಮೀನಿನಲ್ಲಿನ ಒಣಗಿದ ಹುಲ್ಲಿಗೆ ಬೆಂಕಿಯಿಟ್ಟಿದ್ದು ಆ ಬೆಂಕಿಯು ಮಾವಿನ ಮರಗಳಿಗೆ ಆವರಿಸಿದೆ. ಸುಮಾರು 15ಕ್ಕೂ ಹೆಚ್ಚುಮರಗಳು ಸುಟ್ಟಿವೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.