Home Sidlaghatta ಪೌರಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಪೌರಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ

0

Sidlaghatta : ಶಿಡ್ಲಘಟ್ಟ ನಗರಸಭೆ (City Municipal council CMC) ಸಮುದಾಯ ಭವನದಲ್ಲಿ ನಗರಸಭೆ ಹಾಗೂ ನಾರಾಯಣ ಎಜುಕೇಷನ್ ಸೊಶಿಯಲ್ ಟ್ರಸ್ಟ್ ಚಿಕ್ಕಬಳ್ಳಾಪುರ ಇವರ ಸಹಯೋಗದೊಂದಿಗೆ ಸ್ವಚ್ಚ ಭಾರತ್ ಮಿಷಿನ್ ಯೋಜನೆಯಲ್ಲಿನ IEC ಕಾರ್ಯಕ್ರಮದ ಅನುಷ್ಟಾನದ ಕಾರ್ಯಾಗಾರದಲ್ಲಿ ಭಾಗವಹಿಸಿ ನಗರಸಭೆ ಆಯುಕ್ತ ಶ್ರೀಕಾಂತ್ ಅವರು ಮಾತನಾಡಿದರು.

ಸ್ವಚ್ಚ ಭಾರತ್ ಮಿಷಿನ್ ಯೋಜನೆಯನ್ನು ನಗರಸಭೆಯಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಗರವನ್ನು ಸ್ವಚ್ಚ ಸುಂದರ ನಗರವನ್ನು ಮಾಡಲಿಕ್ಕೆ ಕೈಜೋಡಿಸಬೇಕು ಎಂಬ ಉದ್ದೇಶದಿಂದ ಪ್ರಥಮ ಹಂತದಲ್ಲಿ ಪೌರಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಂಸ್ಥೆಯಿಂದ ಮನೆಮನೆಗೆ ಹೋಗಿ ಕಸ ವಿಂಡನೆ ಮಾಡುವಂತಹ ಕೆಲಸ, ಸಾರ್ವಜನಿಕರು ಕಸ ಹಾಕುವ ಸ್ಥಳಗಳಲ್ಲಿ ಕಸಹಾಕದಂತೆ ರಂಗೋಲಿ ಬಿಡಿಸುವುದು, ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಕಸವನ್ನು ಕಸದ ವಾಹನಕ್ಕೆ ನೀಡುವಂತೆ ತಿಳಿಸುವುದು, ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಮೂಲಕ ಶೌಚಾಲಯವನ್ನು ಬಳಸುವ ವಿಧಾನ, ಸ್ವಚ್ಚಭಾರತ್ ಉದ್ದೇಶದ ಬಗ್ಗೆ ಗೋಡೆ ಬರಹಗಳನ್ನು ಬರೆಸಲಿಕ್ಕೆ ಆದೇಶಿಸಿದ್ದೇವೆ ಎಂದರು.

ಸ್ವಚ್ಚ ಭಾರತ್ ಮಿಷನ್ ಬಗ್ಗೆ ಸ್ಟಿಕ್ಕರ್‌ಗಳನ್ನು ಮಾಡಿಸಿ ಬಿಡುಗಡೆ ಮಾಡಿದ್ದು ರೈಲ್ವೆಷ್ಟೇಷನ್, ಬಸ್‌ನಿಲ್ದಾಣ, ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಮುಂತಾದ ಕಡೆ ಅಂತಿಟಿಸಬೇಕಾಗುತ್ತದೆ. ಪ್ರತಿ ವಾರ್ಡ್ ನಲ್ಲಿ ಬೀದಿನಾಟಕಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈಗಾಗಲೆ ಸ್ಯಾನಿಟರಿ ಪ್ಯಾಡ್, ಮೆಡಿಕಲ್ ತ್ಯಾಜ್ಯವನ್ನು ಸಂಗ್ರಹಿಸಲು ಒಂದು ಎನ್.ಜಿ.ಒ ಸಂಸ್ಥೆಗೆ ಟ್ಯಾಗ್ ಮಾಡಿದ್ದೇವೆ. ಅವರು ವಾರಕ್ಕೆ ಒಂದು ಭಾರಿ ಸಂಗ್ರಹಿಸುವರು. ಕಬ್ಬಿಣ ಮತ್ತು ಪ್ಲಾಸ್ಟಿಕ್ ಗಳನ್ನು ಬೇರೆ ಸಂಗ್ರಹಿಸಬೇಕು. ಟಿವಿ, ಮೊಬೈಲ್ ಎಲೆಕ್ಟ್ರಿಕಲ್ ವೇಸ್ಟ್ ಬೇರೆ ಸಂಗ್ರಹಿಸಬೆಕು. ವೇಸ್ಟ್ ಮೇನೇಜ್‌ಮೆಂಟ್ ಟೆಂಡರ್ ಕರೆದಿದ್ದೇವೆ, ಆದಷ್ಟು ಬೇರ್ಪಡೆ ಮಾಡುವ ಕೆಲಸ ಪರಿಣಾಮಕಾರಿಯಾಗಿ ಮಾಡಬೇಕೆಂದರು.

ನಾರಾಯಣ ಸಂಸ್ಥೆಯವರು ನಾಳೆಯಿಂದ ಪ್ರತಿದಿನಾ 4 ಗಂಟೆ ಮೇಲೆ ಟಿಪ್ಪರ್‌ಗಳನ್ನು ಬಳಸಿಕೊಂಡು ಮಟನ್ ಚಿಕ್ಕನ್ ತ್ಯಾಜ್ಯಗಳನ್ನು ಹಾಗೂ ಬೂದಿಯನ್ನು ಸಂಗ್ರಹ ಮಾಡಿಸಬೇಕು. ನಗರದಲ್ಲಿ ಸುಮಾರು 2000 ಒಲೆಗಳು ಇದ್ದು ಅದಕ್ಕೆ ಪ್ರತಿ ತಿಂಗಳು 250 ರೂಗಳನ್ನು ಚಾರ್ಜ ಮಾಡುವುದರಿಂದ ನಿರ್ವಹಣಾ ವೆಚ್ಚಕ್ಕೆ ಹಣ ಬರುತ್ತದೆ, ನಗರ ಸ್ವಚ್ಚವಾಗಿರುತ್ತದೆ ಎಂದರು.

ಈಗಾಗಲೆ ಪ್ಲಾಸ್ಟಿಕ್ ರೈಡ್ ಮಾಡಿ 6-7 ಸಾವಿರ ಡಂಡ ಹಾಕಲಾಗಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ಮುಕ್ತ ಮಾಡೋಣ ಎಂದರು.

ಪೌರಕಾರ್ಮಿಕರಿಗೆ ಪ್ಲಾಸ್ಟಿಕ್ ಬಳಕೆಯಿಂದ ತುಂಬಾ ಕಷ್ಟವಾಗಿದ್ದು, ಪೌರಕಾರ್ಮಿಕರು ಯಾವುದೇ ಅಂಗಡಿಯಲ್ಲಿ ಪ್ಲಾಸ್ಟಿಕ್ ಇದ್ದರೆ ನೀವು ವಶಪಡಿಸಿಕೊಳ್ಳಿ. ನಿಮ್ಮ ಮಾತು ಕೇಳದ ಪಕ್ಷದಲ್ಲಿ ನಮಗೆ ದೂರು ನೀಡಿ. ನಾವೇ ಬಂದು ದಾಳಿ ಮಾಡಿ ಅವರಿಗೆ ಡಂಡ ವಿಧಿಸುತ್ತೇವೆ. ಹೊಸಕಾನೂನು ಪ್ರಕಾರ ಜೈಲು ಶಿಕ್ಷೆ ಇದೆ. ಪರಿಸರ ಇಲಾಖೆ ಸಹ ಅವರಿಗೆ ದಂಡ ವಿಧಿಸುತ್ತದೆ ಎಂದರು.

ಮನೆಗಳಲ್ಲಿ ಹಸಿಕಸ, ಒಣಕಸ ಬೇರ್ಪಡಿಸಿ ನೀಡಬೇಕು. ಇಲ್ಲದೆ ಪಕ್ಷದಲ್ಲಿ ನಗರಸಭೆ ವತಿಯಿಂದ ದಂಡ ಹಾಕುತ್ತಾರೆ ಎಂದು ಸಂಸ್ಥೆಯವರು ಮನೆಮನೆಗೆ ಹೋಗಿ ಅರಿವು ಮೂಡಿಸಬೇಕು. ಆಯಾ ವಾರ್ಡ್ ಸದಸ್ಯರ ಅನುಮತಿ ಪಡೆದು, ವಾರ್ಡ್ ಸದಸ್ಯರ ಜೊತೆ ಸಂಸ್ಥೆಯವರು ಹೋಗಿ ಅರಿವು ಮೂಡಿಸಬೇಕು ಎಂದರು.

ಸ್ವಚ್ಚ ಭಾರತ್ ಮಿಷನ್ ಬಗ್ಗೆ ಸ್ಟಿಕ್ಕರ್‌ಗಳನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾರಮೇಶ್ ರವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಮುರಳಿ, ನಗರ ಸಭೆ ಸದಸ್ಯರಾದ ಅನಿಲ್ ಕುಮಾರ್, ಬಸ್ ಮಂಜುನಾಥ್, ಮನೋಹರ್, ನಾರಾಯಣ ಟ್ರಸ್ಟ್ ಅಧ್ಯಕ್ಷೆ ಪಾರ್ವತಿ, ಆರ್‌ಒ ನಾಗರಾಜ್, ನಾರಾಯಣ ಸಂಸ್ಥೆ ಸಿಬ್ಬಂದಿ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version