Home Sidlaghatta ಜಯಚಾಮರಾಜೇಂದ್ರ ಒಡೆಯರ್ ಜನ್ಮ ದಿನಾಚರಣೆ

ಜಯಚಾಮರಾಜೇಂದ್ರ ಒಡೆಯರ್ ಜನ್ಮ ದಿನಾಚರಣೆ

0

Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಎಸ್.ಜೆ.ಸಿ ಶಾಲೆಯಲ್ಲಿ (SJC School) ಸೋಮವಾರ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ (Sri Jayachamarajendra Wadiyar Birth Anniversary) ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮುಖ್ಯ ಶಿಕ್ಷಕಿ ಸಾವಿತ್ರಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದ ಪ್ರಮುಖರು ಹಾಗೂ ಕೊನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಈಗಿನ ಪೀಳಿಗೆಯವರ ಜತೆಗೆ ಮುಂದಿನ ಪೀಳಿಗೆಯವರು ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರು ನಮ್ಮೆಲ್ಲರಿಗೂ ಆದರ್ಶಪ್ರಾಯ, ಪ್ರೇರಣೆದಾಯಕರೂ ಹೌದು ಎಂದು ಅವರು ತಿಳಿಸಿದರು.

ಅವರು ಮಹಾರಾಜರಾಗಿ, ಆನಂತರ ರಾಜ್ಯಪಾಲ ಸಹಿತ ಹಲವಾರು ಹುದ್ದೆಗಳ ಮೂಲಕ ಜನರ ಪರವಾಗಿ ಹತ್ತಾರು ಕೆಲಸಗಳನ್ನು ಮಾಡಿದರು. ಮಹಾರಾಜರು ಹತ್ತಾರು ಗ್ರಾಮಗಳಲ್ಲಿ ಕಟ್ಟಿಸಿದ ಕೆರೆ ಕಟ್ಟೆಗಳು ಈಗಲೂ ಜನರಿಗೆ ಬದುಕು ನೀಡಿವೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂಥ ಕೆಲಸವನ್ನು ಸರ್ಕಾರವೂ ಮಾಡಬೇಕು ಎಂದು ಹೇಳಿದರು.

ಶಾಲಾ ಶಿಕ್ಷರಾದ ಸಾವಿತ್ರಿ, ರಾದಾ, ಶ್ರಾವ್ಯ, ಲೇಖನ, ಚಿತ್ರ, ಮೇಘನಾ,ಪೂಜಾ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version