Chikkaballapur : ಚಿಕ್ಕಬಳ್ಳಾಪುರ ನಗರದ ಪ್ರಶಾಂತನಗರದ KSRTC ವಿಭಾಗೀಯ ಕಚೇರಿ ರಸ್ತೆ ಬಳಿ ಶನಿವಾರ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ (Srinivasa Kalyanotsava) ನಡೆಸಲಾಯಿತು.

ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಹಾಗೂ ಅವರ ಕುಟುಂಬ ಸದಸ್ಯರು ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಂಜೆ 5.30ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪುರೋಹಿತರು ಕಲ್ಯಾಣೋತ್ಸವದ ಬಗ್ಗೆ ನೆರೆದಿದ್ದ ನಾಗರಿಕರಿಗೆ ವಿವರಿಸಿದರು.
ಕಲ್ಯಾಣೋತ್ಸವಕ್ಕೆ ನಗರದ ವಿವಿಧ ಭಾಗಗಳ ನಾಗರಿಕರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.