Chikkaballpaur : ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸತ್ತಿಗೆರೆ, ಬೋಗಪರ್ತಿ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀರಗಾನಹಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ಮತ್ತೆ ಲಘು ಭೂಕಂಪನವಾಗಿದೆ (Earthquake). 15 ದಿನದ ಅವಧಿಯಲ್ಲಿ ಎರಡನೇ ಬಾರಿ ಭೂಕಂಪನವಾಗುತ್ತಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಭಾರಿ ಮಳೆಯ ಕಾರಣ ಅಂತರ್ಜಲದಲ್ಲಿ ಬದಲಾವಣೆ ನೀರು ಭೂಮಿಯ ಆಳಕ್ಕೆ ಇಳಿಯುವುದರಿಂದ ಈ ರೀತಿಯ ಭೂಕಂಪನಗಳು ಈ ಭಾಗದಲ್ಲಿ ಮುಂದಿನ ಒಂದು ತಿಂಗಳವರೆಗೂ ಸಂಭವಿಸಲಿವೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.
ಭೂಕಂಪನ ಪ್ರದೇಶಗಳಾದ ಬಂಡಹಳ್ಳಿ, ಶೆಟ್ಟಿಗೆರೆ ಗ್ರಾಮಗಳಿಗೆ ಸಚಿವ ಡಾ.ಕೆ ಸುಧಾಕರ್ (Dr. K. Sudhakar) ಭೇಟಿ ನೀಡಿ “ಜನರು ಆತಂಕಕ್ಕೆ ಒಳಗಾಗಬೇಡಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿದ್ದು ಭೂಕಂಪನದಿಂದ ಹೆಚ್ಚು ಹಾನಿಯಾಗಿದ್ದರೆ ಪರಿಹಾರ ನೀಡಲು ಸರ್ಕಾರ ಸಿದ್ಧವಿದೆ ” ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು ಸಚಿವರ ಜೊತ್ತೆ ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ಸಹ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur