Chintamani : 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆ (UPSC Examination)ಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೂವರು ಅಭ್ಯರ್ಥಿಗಳು ರ‍್ಯಾಂಕ್ (Rank holders) ಪಡೆದಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಗಡಿಗವಾರಹಳ್ಳಿ ಮೂಲದ ನಗರದ ಅಶ್ವಿನಿ ಬಡಾವಣೆಯಲ್ಲಿ ನೆಲೆಸಿರುವ ಜಿ.ವಿ.ಸುಬ್ಬಾರೆಡ್ಡಿ ಮತ್ತು ಕೆ.ಪಿ.ಶಾರದಮ್ಮ ದಂಪತಿಯ ಮಗ ಜಿ.ಎಸ್.ಅರ್ಜುನ್ 452 ನೇ ರ‍್ಯಾಂಕ್, ಮಿಂಡಿಗಲ್ ಗ್ರಾಮದ ಎಂ.ವೈ.ವೆಂಕಟೇಶ್ ಮತ್ತು ರಾಮಲಕ್ಷ್ಮಮ್ಮ ಅವರ ಪುತ್ರಿ ಎಂ.ವಿ.ಮಾಲಾಶ್ರೀ 504 ನೇ ರ‍್ಯಾಂಕ್, ಕೈವಾರ ಹೋಬಳಿಯ ಬನಹಳ್ಳಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎಂ.ನಾರಾಯಣಸ್ವಾಮಿ ಮತ್ತು ಸುಶೀಲಮ್ಮ ಅವರ ಪುತ್ರ ಬಿ.ಎನ್.ಅಭಿಷೇಕ್ 708ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಮೂವರೂ ಸಹ ಎಂಜಿನಿಯರ್ ಪದವೀಧರರಾಗಿದ್ದರೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur