Chikkaballapur : ಚಿಕ್ಕಬಳ್ಳಾಪುರ ನಗರದ ಬಲಮುರಿ ವೃತ್ತದಲ್ಲಿ ಉತ್ತರ ಪ್ರದೇಶ (Uttar Pradesh), ಉತ್ತರಾಖಂಡ (Uttarakhand), ಮಣಿಪುರ (Manipur) ಮತ್ತು ಗೋವಾ (Goa) ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ (Elections) BJP ಗೆಲುವು (Victory) ದಾಖಲಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರವಾಗಿ ಘೋಷಣೆಗಳನ್ನು ಕೂಗುತ್ತ ಸಂಭ್ರಮ (Celebration) ಆಚರಿಸಿದರು.
ಕುಟುಂಬ ರಾಜಕಾರಣ, ಜಾತಿ ರಾಜಕಾರಣದ ಮೂಲಕ ದೇಶದ ಏಳಿಗೆಗೆ ಕುತ್ತು ತಂದವರಿಗೆ ಸೋಲು ಉಂಟಾಗಿದ್ದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮೋದಿ ಅವರು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೇಶ ಮತ್ತಷ್ಟು ಅಭಿವೃದ್ಧಿಯನ್ನು ಹೊಂದಲಿದೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ದೇಶದ ನಾಲ್ಕು ರಾಜ್ಯಗಳ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ. ಈ ಚುನಾವಣೆ ಬಿಜೆಪಿಗೆ ಮತ್ತಷ್ಟು ಶಕ್ತಿಯನ್ನು ನೀಡಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಹೇಳಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಲಕ್ಷ್ಮಿಪತಿ, ಜಿಲ್ಲಾ ಕಾರ್ಯದರ್ಶಿ ಅಶೋಕ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಸ್. ಕೃಷ್ಣಾರೆಡ್ಡಿ, ನಗರ ಉಪಾಧ್ಯಕ್ಷ ಆನಂದ್ (ಅನು), ಜಿಲ್ಲಾ ಉಪಾಧ್ಯಕ್ಷೆ ಕಲಾ ನಾಗರಾಜ್, ಜಿಲ್ಲಾಸಹ ವಕ್ತಾರ ರಾಮಣ್ಣ, ಮಾಧ್ಯಮ ಪ್ರಮುಖ್ ಮಧುಚಂದ್ರ, ಮುಖಂಡರಾದ ಚಂದ್ರಣ್ಣ, ಶ್ರೀನಿವಾಸಗೌಡ, ಬೈರೇಗೌಡ, ನಾಯನಹಳ್ಳಿ ಶ್ರೀನಿವಾಸ್, ಮೈಲಪ್ಪನಹಳ್ಳಿ ಕೃಷ್ಣಮೂರ್ತಿ, ಮೊಬೈಲ್ ಬಾಬು, ಪ್ರೇಮಲೀಲಾ, ಮಲ್ಲಿಕಾ, ನರ್ಮದಾ ರೆಡ್ಡಿ, ಸುಮಿತ್ರಾ ಮತ್ತಿತರರು ಪಾಲ್ಗೊಂಡಿದ್ದರು.
ಬಾಗೇಪಲ್ಲಿ
Bagepalli : ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದ ಮುಂದೆ ಐದು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಆರ್. ಪ್ರತಾಪ್, ಬಿಜೆಪಿ ಪರಿಶಿಷ್ಟ ವರ್ಗ ಮೋರ್ಚಾ ಜಿಲ್ಲಾ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಸೋಮಶೇಖರ ರೆಡ್ಡಿ, ಪ್ರಭಾಕರ ರೆಡ್ಡಿ, ರಂಗನಾಥ್, ನಿರ್ಮಲಮ್ಮ, ಮಂಜುಳಮ್ಮ, ಗಂಗುಲಮ್ಮ, ಗೋಪಾಲ್, ಮಂಜುಳಾಬಾಯಿ, ಲಕ್ಷ್ಮಿ, ಸರ್ವಮಂಗಳಾ, ರಂಗಾರೆಡ್ಡಿ, ಶಶಿ, ಕೆಡಿಪಿ ಸದಸ್ಯ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.