Vemgal : ವೇಮಗಲ್ ಪಟ್ಟಣದಲ್ಲಿ ನೆಲೆಸಿರುವ ದ್ರೌಪದಿ ಧರ್ಮರಾಯಸ್ವಾಮಿಯ 49ನೇ ನೇ ವರ್ಷದ ಕರಗ (Karaga) ಮಹೋತ್ಸವ ಗುರುವಾರ ಅದ್ದೂರಿಯಾಗಿ ನೆರವೇರಿತು. ಕರಗದ ಪೂಜಾರಿ ಜಗದೀಶ್ ಸ್ವಾಮಿ ಹೂವಿನ ಕರಗ ಹೊತ್ತು ದ್ರೌಪದಿ ಧರ್ಮರಾಯಸ್ವಾಮಿಗೆ ಸಾಂಪ್ರದಾಯಕವಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ಸಲ್ಲಿಸಿದರು.
ಬುಧವಾರ ರಾತ್ರಿ ಇಡೀ ನೃತ್ಯ ಪ್ರದರ್ಶಿಸಿ ಗಮನ ಸೆಳೆದ ಕರಗ ಗುರುವಾರ ಸಂಜೆ ಅಗ್ನಿಕುಂಡ ದಲ್ಲಿ ಪ್ರವೇಶಿಸುವ ಮೂಲಕ ಕರಗವು ಸಂಪನ್ನವಾಯಿತು.
ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಶಾಸಕ ವರ್ತೂರ್ ಪ್ರಕಾಶ್, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಸಿಎಂಆರ್ ಶ್ರೀನಾಥ್, ಉದಯ್ ಕುಮಾರ್, ಎಲ್.ಎ ಮಂಜುನಾಥ್, ಕುರ್ಕಿ ರಾಜೇಶ್ವರಿ, ಕುಲದ ಗೌಡರಾದ ಚಿಕ್ಕಮುನಿಯಪ್ಪ, ಯಜಮಾನ್ ಅಶ್ವಥಪ್ಪ, ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷರು, ಸರ್ವ ಪದಾಧಿಕಾರಿಗಳು ಹಾಗೂ ಜನರು ಆಗಮಿಸಿದ್ದರು.
