Chikkaballapur : ವಿಶ್ವಕರ್ಮ ಪರಬ್ರಹ್ಮ ಸ್ವರ್ಣ ಖಚಿತ ಪಂಚಲೋಹ ಮೂರ್ತಿಯ ದೃಷ್ಟಿ ಬಿಂಬ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಗುರುವಾರ ಚಿಕ್ಕಬಳ್ಳಾಪುರ ನಗರದಲ್ಲಿ ವಿಶ್ವಕರ್ಮರ (Vishwakarma) ಪಂಚಲೋಹ ಮೂರ್ತಿಯ ಮುತ್ತಿನ ಪಲ್ಲಕ್ಕಿ ಉತ್ಸವ (Muttina Pallakki) ಅದ್ಧೂರಿಯಾಗಿ ನೆರವೇರಿತು. ಕಾಳಿಕಾಂಬ ಕಮಠೇಶ್ವರ ದೇಗುಲದಿಂದ ಆರಂಭವಾದ ಮೆರವಣಿಗೆ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತಾನಾಡಿದ ಮಾಜಿ ಸಚಿವ ಡಾ.ಕೆ.ಸುಧಾಕರ್ , ಭೂಲೋಕದಲ್ಲಿ ಎಲ್ಲವನ್ನೂ ಸೃಷ್ಟಿಸಿದ ದೇವರು ಮಹರ್ಷಿ ವಿಶ್ವಕರ್ಮರು ಎಂದು ಪೂಜಿಸಲಾಗುತ್ತದೆ. ಶ್ರಮವನ್ನೇ ನಂಬಿರುವ ಜನಾಂಗ ವಿಶ್ವಕರ್ಮಿಗಳು. ಈ ಸಮುದಾಯದಲ್ಲಿ ಅನೇಕ ಬಡವರಿದ್ದಾರೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮುದಾಯವನ್ನು ಮುಂದೆ ತರಲು ಸರ್ಕಾರ ಕ್ರಮ ವಹಿಸಬೇಕು. ಈ ಸಮುದಾಯಗಳ ಬಗ್ಗೆ ವಿಶೇಷ ಕಾಳಜಿಯನ್ನು ಬಿಜೆಪಿ ಹೊಂದಿದ್ದು ಕುಶಲಕರ್ಮಿಗಳ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ₹ 13 ಸಾವಿರ ಕೋಟಿ ಮೊತ್ತದ ಪಿಎಂ ವಿಶ್ವಕರ್ಮ ಯೋಜನೆಯನ್ನು ನೀಡಿದ್ದಾರೆ” ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ವಿಶ್ವಕರ್ಮ ಉತ್ಸವ ಸಮಿತಿ ಅಧ್ಯಕ್ಷ ನವೀನ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಜೆ.ಹರೀಶ್ ಕುಮಾರ್, ಜಯಚಂದ್ರ ಮತ್ತಿತ್ತರರು ಪಾಲ್ಗೊಂಡಿದ್ದರು.