Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka Pollution Control Board) ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ರವರ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ವಿಶ್ವಪರಿಸರ ದಿನಾಚರಣೆ (World Environment Day) ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಿ.ರಾಜಶೇಖರ “ಉತ್ತಮ ಪರಿಸರ ಆರೋಗ್ಯದ ಬದುಕು, ಉತ್ತಮ ಜೀವನಕ್ಕೆ ಅತ್ಯಗತ್ಯವಾಗಿದ್ದು ಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರು ಪರಿಸರ ಪ್ರಜ್ಞೆ ಬೆಳೆಸಿಕೊಂಡು ಪ್ರತಿದಿನವೂ ಪರಿಸರ ರಕ್ಷಿಸುವ ಕಾರ್ಯ ಮಾಡಬೇಕು. ‘ಒಂದೇ ಒಂದು ಭೂಮಿ’ ಪ್ರಕೃತಿಯ ಜೊತೆ ಸಾಮರಸ್ಯದಿಂದ ಸಮರ್ಥವಾಗಿ ಬದುಕೋಣ ಎಂಬ ಈ ವರ್ಷದ ಪರಿಸರ ದಿನಾಚರಣೆಯ ಘೋಷವಾಕ್ಯ ಅರ್ಥಪೂರ್ಣವಾಗಿದ್ದು ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ ಮಿಸ್ಕಿನ್, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಮಹಾಂತೇಶ್, ಪರಿಸರ ಅಧಿಕಾರಿ ಟಿ.ಎಂ.ಸಿದ್ದೇಶ್ವರ ಬಾಬು, ಪರಿಸರ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ವಿಶ್ವ ಪರಿಸರ ದಿನದ ಅಂಗವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮ (Nandhi Hills), ಚನ್ನಗಿರಿ ಮತ್ತು ಸ್ಕಂದಗಿರಿ (Skandagiri Hills) ತಪ್ಪಲಿನಲ್ಲಿ ಅರಣ್ಯ ಇಲಾಖೆ ಮತ್ತು ರೋಟರಿ ಸಂಸ್ಥೆ ಸಹಕಾರದೊಂದಿಗೆ ಸಕ್ರಿಯ ಟ್ರಸ್ಟ್ (Sakriya Charitable Trust)ನಿಂದ ಪ್ಯಾರಾ ಮೋಟರ್ ಗ್ಲೈಡಿಂಗ್ (Para Motor Gliding) ಮೂಲಕ ಸೀಡ್ ಬಾಲ್ (Seed Ball) ಬಿತ್ತನೆ ಕಾರ್ಯ ಮಾಡಲಾಯಿತು.
ಪ್ಯಾರಾ ಮೋಟರ್‌ನಲ್ಲಿ ಸಕ್ರಿಯ ಟ್ರಸ್ಟ್‌ನ ಅನಿತಾ ರಾವ್ 75 ಸಾವಿರ ಕೆ.ಜಿಗಳಷ್ಟು ಸೀಡ್‌ಬಾಲ್‌ಗಳನ್ನು 18 ಕಿ.ಮಿ ವ್ಯಾಪ್ತಿಯ ಈ ಅರಣ್ಯ ಪ್ರದೇಶಗಳ ಬಿತ್ತನೆ ಮಾಡಿದರು.
ಚಿಂತಾಮಣಿ
ವಿಶ್ವಪರಿಸರ ದಿನಾಚರಣೆಯ (World Environment Day) ಅಂಗವಾಗಿ ಭಾನುವಾರ Chintamani ತಾಲ್ಲೂಕು ಆಡಳಿತ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯುವಜನರು ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಎಂಬ ಉಕ್ತಿಯಂತೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು.
ತಾಲ್ಲೂಕು ಕಚೇರಿಯ ಸುತ್ತಮುತ್ತಲು ಸ್ವಚ್ಛಗೊಳಿಸಿ ಗಿಡಗಳನ್ನು ನೆಡಲಾಯಿತು. ಶಿರಸ್ತೇದಾರ್ ಶೋಭಾ, ಕಂದಾಯ ಇಲಾಖೆಯ ಅಧಿಕಾರಿ ಗೋಪಾಲಕೃಷ್ಣ, ಗೋಕುಲ, ತಾಜ್ಪಾಷಾ, ಸುಬ್ರಮಣಿ, ನಾಗವೇಣಿ, ದೀಪ, ಅಮರ್, ಅವಿನಾಶ್, ನವೀನ್, ಮೀನಾಕ್ಷಿ, ಪಾರ್ವತಿ, ಸುಜಾತಾ, ಟಿ.ಡಿ.ಮೋಹನ್ ಬಾಬು, ಶರಣಿ, ಸಂದೀಪ್, ಹರೀಶ್, ಪ್ರಭು, ಗಂಗಾಧರ್, ಪ್ರದೀಪ್, ಮನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಿಡ್ಲಘಟ್ಟ
Sidlaghatta ತಾಲ್ಲೂಕಿನ ಮೇಲೂರು ಹಾಗು ಚೌಡಸಂದ್ರ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (Shree Kshethra Dharmasthala Gramabhivruddi Yojane (R)) ವತಿಯಿಂದ ಗಿಡಗಳನ್ನು ನೆಡುವ ಜೊತೆಗೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ವಲಯ ಮೇಲ್ವಿಚಾರಕಿ ಅನಿತಾ ಸುರೇಶ್, ಸೇವಾ ಪ್ರತಿನಿಧಿಗಳು ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿಯ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಪರಿಸರ ದಿನಾಚರಣೆ (World Environment Day) ಅಂಗವಾಗಿ ಬಶೆಟ್ಟಹಳ್ಳಿ ನಾಡ ಕಚೇರಿಯ ಸಿಬ್ಬಂದಿಗೆ ವಿವಿಧ ತಳಿಗಳ ಸಸಿಗಳನ್ನು ವಿತರಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಹಾಗೂ ಹಿತ್ತಲಹಳ್ಳಿಯ KSRTC ಬಸ್ ಡಿಪೋ ಆವರಣದಲ್ಲಿ ಆನೂರು ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಪರಿಸರ ದಿನಾಚರಣೆ (World Environment Day) ಯ ಅಂಗವಾಗಿ ಸುಮಾರು 100 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಹಂಡಿಗನಾಳ ಗ್ರಾಮ ಪಂಚಾಯತಿ ಮತ್ತು ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಸಾದಲಿ
ಕಂದಾಯ ಇಲಾಖೆ, ಸಾದಲಿ ಗ್ರಾಮ ಪಂಚಾಯಿತಿಯಿಂದ ಸಾದಲಿ ನಾಡ ಕಚೇರಿ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಸಸಿ ನೆಡಲಾಯಿತು.
ಚೇಳೂರು
ಚೇಳೂರು ತಾಲ್ಲೂಕಿನ ಗಡಿಗವಾರಪಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ಪರಿಸರ ದಿನವನ್ನು ಶಾಲಾ ವಿದ್ಯಾರ್ಥಿಗಳು ಇನ್ನೂರಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡುವ ಮೂಲಕ ಆಚರಿಸಲಾಯಿತು