Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ 62ನೇ ವರ್ಷದ ದ್ರೌಪತಮ್ಮನವರ ಕರಗ (Draupatamma Karaga) ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ಅದ್ಧೂರಿಯಾಗಿ ನಡೆಯಿತು. ಮಹಿಳೆ ಕರಗ ಹೊರುವ ಮೂಲಕ ರಾಜ್ಯದಲ್ಲಿಯೇ ವಿಶೇಷ ಎನಿಸಿರುವ ಈ ಕರಗವನ್ನು ಬಾಪೂಜಿನಗರದ ಮಹೇಶ್ವಮ್ಮ ದೇವಾಲಯದಲ್ಲಿ ಅರುಂಧತಿ ಹರಿಜನ ಅಭಿವೃದ್ಧಿ ಸಂಘ, ದ್ರೌಪತಮ್ಮ ಕರಗ ಮಹೋತ್ಸವ ಸಮಿತಿ ಹಾಗೂ ಮಹೇಶ್ವರಿ ಮಹಿಳಾ ಮಂಡಳಿಯ ಆಶ್ರಯದಲ್ಲಿ 1961ರಿಂದ ನಡೆಸುಕೊಂಡು ಬರಲಾಗಿದೆ.
ಧ್ವಜಸ್ಥಂಬ ಪ್ರತಿಷ್ಠಾಪನೆಯಿಂದ ಆರಂಭವಾದ ಮಹೋತ್ಸವವು ಹಸಿ ಕರಗ, ದೀಪೋತ್ಸವ ಸೇರಿದಂತೆ ಹೋಮ ಹಾಗೂ ನಾನಾ ರೀತಿ ಪೂಜೆಗಳು ನಡೆದವು. ಶನಿವಾರ ರಾತ್ರಿ ಹೂವಿನ ಕರಗಕ್ಕೆ ಮಹೇಶ್ವರಮ್ಮ ದೇವಾಲಯದಿಂದ ಚಾಲನೆ ದೊರೆಯಿತು. ರಾತ್ರಿಯಿಡಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಎಂ.ಶಿವಾನಂದ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು, ಸಂಘದ ಪದಾಧಿಕಾರಿಗಳಾದ ಸಂದೀಪ್ ಚಕ್ರವರ್ತಿ, ಸಿಎನ್.ಮುರಳಿ, ಮೋಹನ್, ವೆಂಕಟೇಶ್ ಸೇರಿದಂತೆ ಮಹೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಶ್ರೀಮಾತಾ ಮಹೇಶ್ ಪಡೆ ಮಹಿಳಾ ಮಂಡಳಿ ಪದಾಧಿಕಾರಿಗಳು ಭಾಗವಹಿಸಿದ್ದರು.