Home News Chikkaballapur 63 ನೇ ವರ್ಷದ ದ್ರೌಪತಮ್ಮ ಕರಗ ಮಹೋತ್ಸವ

63 ನೇ ವರ್ಷದ ದ್ರೌಪತಮ್ಮ ಕರಗ ಮಹೋತ್ಸವ

0
Chikkaballapur 63rd Droupadamma Karaga

Chikkaballapur : ರಾಜ್ಯದಲ್ಲಿಯೇ ವಿಶೇಷವಾಗಿ ಮಹಿಳೆ ಕರಗ ಹೊರುವ ದ್ರೌಪತಮ್ಮನವರ 63 ನೇ ವರ್ಷದ ಕರಗ ಮಹೋತ್ಸವವು (Droupadamma Karaga) ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಶ್ರದ್ಧಾಭಕ್ತಿ ಹಾಗೂ ಅದ್ಧೂರಿಯಾಗಿ ನೆರವೇರಿತು.

ಅರುಂಧತಿ ಹರಿಜನ ಅಭಿವೃದ್ಧಿ ಸಂಘ, ದ್ರೌಪತಮ್ಮ ಕರಗ ಮಹೋತ್ಸವ ಸಮಿತಿ ಹಾಗೂ ಮಹೇಶ್ವರಿ ಮಹಿಳಾ ಮಂಡಳಿಯ ಆಶ್ರಯದಲ್ಲಿ 1961 ರಿಂದ ಬಾಪೂಜಿನಗರದ ಮಹೇಶ್ವಮ್ಮ ದೇವಾಲಯದಲ್ಲಿ ದ್ರೌಪತಮ್ಮ ಕರಗ ಮಹೋತ್ಸವವು ನಡೆಯುತ್ತಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಧ್ವಜ ಸ್ಥಂಬ ಪ್ರತಿಷ್ಠಾಪನೆಯಿಂದ ಆರಂಭವಾದ ಮಹೋತ್ಸವವು ಹಸಿ ಕರಗ, ದೀಪೋತ್ಸವ ಸೇರಿದಂತೆ ಹೋಮ ಹಾಗೂ ನಾನಾ ರೀತಿ ಪೂಜೆಗಳು ಮತ್ತು ಕರಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಶನಿವಾರ ರಾತ್ರಿ ಹೂವಿನ ಕರಗ ಮಹೇಶ್ವರಮ್ಮ ದೇವಾಲಯದಿಂದ ರಾತ್ರಿಯಿಡಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕರಗದ ಅಂಗವಾಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version