Home News Bagepalli ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ

0
Bagepalli Ashwameda Classic Bus Inauguration

Bagepalli : ಬಾಗೇಪಲ್ಲಿ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಸೋಮವಾರ ಅಶ್ವಮೇಧ ಕ್ಲಾಸಿಕ್ ಬಸ್‌ಗಳ (Ashwameda Classic Bus) ಸಂಚಾರಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚಾಲನೆ (Inauguration) ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಬಾಗೇಪಲ್ಲಿ ಬಸ್ ಘಟಕಕ್ಕೆ ಐದು ಬಸ್‌ಗಳ ಅಗತ್ಯವಿತ್ತು. ಅದರಲ್ಲಿ ಈಗ ಮೂರು ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಈ ಬಸ್‌ಗಳು ಬಾಗೇಪಲ್ಲಿಯಿಂದ ತಡೆರಹಿತವಾಗಿ ಬೆಂಗಳೂರು ನಗರಕ್ಕೆ ಸಂಚರಿಸಲಿದ್ದು ಈ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವಿದೆ. ಘಟಕದಲ್ಲಿ 50ಕ್ಕೂ ಹೆಚ್ಚು ಬಸ್‌ಗಳ ಅವಧಿ ಮೀರಿದ ಹೊರತಾಗಿಯೂ, ಪ್ರಯಾಣಿಕರ ಸಂಚಾರಕ್ಕೆ ಬಳಕೆ ಆಗುತ್ತಿವೆ. ಹೊಸ ಬಸ್‌ಗಳಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ್, ಬಸ್ ಘಟಕದ ಪ್ರಭಾರಿ ಸಂಚಾರಿ ನಿಯಂತ್ರಕ ಶ್ರೀನಿವಾಸಮೂರ್ತಿ, ಅಧಿಕಾರಿಗಳಾದ ಮಂಜುನಾಥ್, ಮಲ್ಲಿಕಾರ್ಜುನ, ಮಹಮದ್ ಖಾಲಿದ್, ಚಲಪತಿ, ಬೈರಡು, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version