Gudibande : ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಪಟ್ಟಣ ಪಂಚಾಯತಿ ಘನತ್ಯಾಜ್ಯ ವಿಲೇವಾರಿ ಘಟಕದ ಬಳಿ ₹3 ಕೋಟಿ ವೆಚ್ಚದಲ್ಲಿ ಮಲ ತಾಜ್ಯ ಶುದ್ಧೀಕರಣ ಘಟಕ ನಿರ್ಮಾಣ (sewage treatment unit) ಕಾಮಗಾರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (S N Subbareddy) ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ , ಪಟ್ಟಣದಲ್ಲಿ ಒಳಚರಂಡಿ ನಿರ್ಮಿಸಲು ಯೋಜನೆ ಇದೆ. ಆದರೆ ಕೆಲವು ವಾರ್ಡ್‍ಗಳಲ್ಲಿ ಬಂಡೆ ಸಮಸ್ಯೆ ಇರುವುದರಿಂದ ಚರಂಡಿ ಹಾಕಲು ಕಷ್ಟ ಆಗುತ್ತಿದೆ. ಆದಕಾರಣ, ಪ್ರಸ್ತುತ ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗುತ್ತಿದೆ. ಪಟ್ಟಣದಲ್ಲಿ ಯುಜಿಡಿ ಮತ್ತು ನೈರ್ಮಲ್ಯವನ್ನು ಕಾಯ್ದು ಹಿಡಿಯುವುದು ನನ್ನ ಜವಾಬ್ದಾರಿ. ಇದರ ಅಂಗವಾಗಿ, ನಾವು ಹಲವಾರು ಕಾಮಗಾರಿ ಮಾಡುತ್ತಿದ್ದು, ಪಟ್ಟಣದ ಸ್ವಚ್ಛತೆ ಕಾಪಾಡುವುದು ಮುಖ್ಯ ಗುರಿಯಾಗಿಯೇ ಇರುತ್ತದೆ. ಪಟಣದ ನೀರಿನ ಪೂರೈಕೆಗೆ ಅಮೃತ-2 ಯೋಜನೆಯಡಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಈ ಕೆಲಸದ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಯುಜಿಡಿ ನಿರ್ಮಾಣ ಕೂಡ ನಡೆಯಲಿದೆ ಎಂದು ತಿಳಿಸಿ ಈ ಘಟಕವನ್ನು ಐದು ವರ್ಷಗಳವರೆಗೆ ಗುತ್ತಿಗೆದಾರರು ನಿರ್ವಹಿಸಬೇಕಾಗಿದ್ದು, ಕಳಪೆ ಕಾಮಗಾರಿ ಮಾಡದೆ ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎ. ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖ್ಯಾಧಿಕಾರಿ ಸಬಾ ಶಿರೀನ್, ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್, ಉಪನಿರೀಕ್ಷಕ ಗಣೇಶ್, ಪ.ಪಂ. ಸದಸ್ಯರಾದ ಇಸ್ಮಾಯಿಲ್ ಅಜಾದ್, ಬಷೀರ್, ರಾಜೇಶ್, ಅಂಬರೀಶ್, ಆದಿನಾರಾಯಣಪ್ಪ, ಮತ್ತು ಪ.ಪಂ. ಸಿಬ್ಬಂದಿ ಚಕ್ರಪಾಣಿ ಉಪಸ್ಥಿತರಿದ್ದರು.