Bagepalli : ಬಾಗೇಪಲ್ಲಿ ತಾಲ್ಲೂಕು ಕಚೇರಿ (Taluk Office) ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ (Madivala Machideva Jayanthi) ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವೈ. ರವಿ (Tahsildar Y. Ravi) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರರು “ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಎಲ್ಲ ಸಮುದಾಯಗಳ ಮುಖಂಡರು ಸರ್ಕಾರದ ಯೋಜನೆ ಹಾಗೂ ಅನುದಾನಗಳನ್ನು ಕಟ್ಟಕಡೆಯವರಿಗೆ ತಲುಪಿಸಲು ಜನಜಾಗೃತಿ ಮೂಡಿಸಬೇಕು. ತಾಲ್ಲೂಕಿನ ಮಡಿವಾಳ ಸಮುದಾಯದ ಮುಖಂಡರ ಮನವಿಯಂತೆ ದೋಬಿಘಾಟ್ ನಿರ್ಮಾಣಕ್ಕೆ ಮಂಜೂರು ಆಗಿರುವ ಜಮೀನಿಗೆ ಹದ್ದುಬಸ್ತ್ ಮಾಡಿಸಲಾಗುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಮಡಿವಾಳ ಎಂದು ನಮೂದಿಸುವುದು ಸರ್ಕಾರದ ಹಂತದಲ್ಲಿ ಆಗಬೇಕು” ಎಂದು ತಿಳಿಸಿದರು.
ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಮಡಿವಾಳ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಸುರೇಶ್, ತಾಲ್ಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ.ಎನ್.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಗಿರೀಶ್ ಬಾಬು, ಕೊತ್ತಕೋಟೆ ಶ್ರೀರಾಮಪ್ಪ, ರವಣಪ್ಪ, ಶ್ರೀನಿವಾಸ್, ರಾಮು, ಬಾಲಕೃಷ್ಣ, ಮಲ್ಲಪ್ಪ, ಚಿನ್ನಪ್ಪಯ್ಯ, ಮೂರ್ತಿ, ಅಶೋಕ್, ಗ್ರಾಮ ಪಂಚಾಯಿತಿಸದಸ್ಯ ಮಂಜುನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur