Chintamani : ಚಿಂತಾಮಣಿ ನಗರದ ತಾಲ್ಲೂಕು ಕಚೇರಿಯಲ್ಲಿ (Taluk Office) ಮಂಗಳವಾರ ಹಮ್ಮಿಕೊಂಡಿದ್ದ ಮಾಚಿದೇವರ ಜಯಂತಿ (Madivala Machideva Jayanthi) ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪ (Tahsildar Hanumantarayappa) ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಹನುಮಂತರಾಯಪ್ಪ” ಶರಣ ಮಡಿವಾಳ ಮಾಚಿದೇವರುಸಮಾಜದಲ್ಲಿ ಜಾತಿ ಮುಖ್ಯವಲ್ಲ, ಜೀವನ ಮುಖ್ಯ ಎಂದು ತೋರಿಸಿಕೊಟ್ಟ 12 ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರು. ಇಂತಹ ಶರಣ ಮಹಾತ್ಮರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಮ್ಮದಿಯ ಜೀವನ ಸಾಧ್ಯ ” ಎಂದರು.
ಸಂಘದ ಅಧ್ಯಕ್ಷ ಗಂಗಾಧರ್, ಪೌರಾಯುಕ್ತ ಉಮಾಶಂಕರ್, ಸಮಾಜ ಕಲ್ಯಾಣ ಇಲಾಖೆಯ ನಾರಮಾಕಲಹಳ್ಳಿ ಕೃಷ್ಣ, ಸಂಘದ ಗೌರವಾಧ್ಯಕ್ಷ ಎನ್.ವೆಂಕಟೇಶ್, ಉಪಾಧ್ಯಕ್ಷ ಚಂದ್ರಬಾಬು, ಪ್ರಧಾನ ಕಾರ್ಯದರ್ಶಿ ಮೋಹನ್, ಪದಾಧಿಕಾರಿಗಳಾದ ಮಲ್ಲಯ್, ರಾಮಚಂದ್ರ, ಚೌಡಪ್ಪ, ಆಂಜನಪ್ಪ, ಸತ್ಯನಾರಾಯಣ್, ಸುರೇಂದ್ರ, ವೆಂಕಟೇಶ್, ವೈ.ನರಸಪ್ಪ, ರವಿ, ಕೆ.ವಿ.ನಾರಾಯಣಸ್ವಾಮಿ, ಬಾಬು, ಮಂಜು, ಶ್ರೀರಾಮಪ್ಪ, ಸಿ.ಎಂ.ವೆಂಕಟರವಣಪ್ಪ ಉಪಸ್ಥಿತರಿದರಿದ್ದರು.