Bagepalli : ಬಾಗೇಪಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ ಮುಂದೆ ಮಂಗಳವಾರ ಸರ್ಕಾರಿ ವಿದ್ಯಾರ್ಥಿನಿಲಯ (Government Hostel) ಗಳಲ್ಲಿನ ನೌಕರರಿಗೆ ಮಾಸಿನ ವೇತನ ನೀಡದಿರುವ ಹಾಗೂ ESI, PF ಹಣ ಕಟ್ಟದಿರುವ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಸರ್ಕಾರಿ ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ (CITU) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಮುಖಂಡರು, ನೌಕರರು (Employees) ಪ್ರತಿಭಟನೆ (Protest) ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ತಾಲ್ಲೂಕು ಸರ್ಕಾರಿ ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ (ಸಿಐಟಿಯು) ತಾಲ್ಲೂಕು ಸಮಿತಿಯ ಗೌರವಾಧ್ಯಕ್ಷ ಬಿ.ಆಂಜನೇಯರೆಡ್ಡಿ “ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು (Warden), ಜವಾನ (Peon) ರು ಹಾಗೂ ಹೊರಗುತ್ತಿಗೆ ಸಿಬ್ಬಂದಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ(Social Welfare Department) ಯಲ್ಲಿ 20ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ನೌಕರರಿಗೆ ಬಾಕಿ ಇರುವ 4 ತಿಂಗಳ ವೇತನಗಳನ್ನು ವಿತರಣೆ ಮಾಡಿ ಕೆಲಸದಿಂದ ತೆಗೆದಿರುವ ನೌಕರರಿಗೆ ಪುನಃ ಕೆಲಸ ನೀಡಬೇಕು. ವೇತನದ ವ್ಯತ್ಯಾಸವನ್ನು ಸರಿಪಡಿಸಿ ಇಎಸ್‍ಐ ಚೀಟಿಯನ್ನು ವಿತರಿಸಿ ಪಿಎಫ್ ಹಣವನ್ನು ಕೂಡಲೇ ಖಾತೆಗೆ ಜಮಾ ಮಾಡಬೇಕು” ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎನ್.ಶೇಷಾದ್ರಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಮನವಿ ಸ್ವೀಕರಿಸಿ “ಒಂದು ವಾರದ ಒಳಗೆ ಬೇಡಿಕೆಗಳನ್ನು ಹಂತ ಹಂತದಲ್ಲಿ ಈಡೇರಿಸಲಾಗುವುದು” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಚಿಕ್ಕನರಸಿಂಹಮೂರ್ತಿ, ಸಂಘದ ಅಧ್ಯಕ್ಷ ಜಿ.ಎನ್.ವೆಂಕಟರವಣಪ್ಪ, ಕಾರ್ಯದರ್ಶಿ ಪ್ರಕಾಶ, ಖಜಾಂಚಿ ಸುನಿತಮ್ಮ, ಮುಖಂಡ ಪಿ.ನಂಜುಂಡಪ್ಪ, ವಿ.ಶ್ರೀನಿವಾಸ್, ನಾರಾಯಣಪ್ಪ, ವೆಂಕಟರವಣಪ್ಪ, ಪಾರ್ವತಮ್ಮ, ನಾಗಮ್ಮ, ಲಕ್ಷ್ಮಮ್ಮ, ಮಮತಾ, ಅಲುವೇಲಮ್ಮ, ಈಶ್ವರಮ್ಮ, ನಾಗಮಣಿ ಉಪಸ್ಥಿತರಿದ್ದರು.