Bagepalli : ಸೆ 27ರಂದು ಭಾರತ್ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ (Bharat Bandh) ಬಾಗೇಪಲ್ಲಿ ತಾಲ್ಲೂಕಿನ ಪ್ರಜಾ ಸಂಘರ್ಷ ಸಮಿತಿ, ಜೆ.ಡಿ.ಎಸ್, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜೀವಿಕ ಸಂಘಟನೆ, ಎಸ್. ಎಫ್.ಐ ಹಾಗೂ ಡಿವೈಎಫ್ಐ ಸಂಘಟನೆಗಳು,ಹಾಗೂ ಇತರೆ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪರಿವೀಕ್ಷಣಾ ಮಂದಿರ ಆವರಣದಲ್ಲಿ ಭಾನುವಾರ ಕರ್ನಾಟಕ ಬಂದ್ ಪೂರ್ವಭಾವಿ ಸಭೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಲಕ್ಷ್ಮಣರೆಡ್ಡಿ ಮಾತನಾಡಿ, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯಲಿದ್ದು, ರಾಜ್ಯದಲ್ಲಿ ಸೆ.27 ರಂದು ಸಂಪೂರ್ಣ ಬಂದ್ ಮಾಡಬೇಕು. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ತಿಳಿಸಿದರು.
ಸೆ.23 ರಂದು ಇನ್ನೂ ಕೆಲ ಸಂಘಟನೆಗಳೊಂದಿಗೆ ಚರ್ಚೆ ಮಾಡಲು ಪುನಃ ಸಭೆಯನ್ನು ಕರೆದು ಅವರ ಬೆಂಬಲ ಸಹ ಕೋರಲಾಗುವುದು ಎಂದು ತಾಲ್ಲೂಕು ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಮಹಮದ್ ಎಸ್ ನೂರುಲ್ಲಾ ತಿಳಿಸಿದರು.
ಪಿ.ಎಸ್. ಎಸ್. ಮುಖಂಡ ಚನ್ನರಾಯಪ್ಪ, ಗೋಪಾಲಕೃಷ್ಣ, ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ, ತಾಲ್ಲೂಕು ಕರವೇ ಅಧ್ಯಕ್ಷ ಹರೀಶ್, ದಲಿತ ಸಂಘರ್ಷ ಸಮಿತಿ ಮೂರ್ತಿ, ಜೀವಿಕ ಸಂಘಟನೆ ಮುಖಂಡ ಅಂಜನಪ್ಪ, ಚೌಡಯ್ಯ, ಎಸ್. ಎಫ್. ಐ ಮುಖಂಡ ಸತೀಶ್, ಹಸಿರು ಸೇನೆ ರಾಜ್ಯ ಸಂಚಾಲಕಿ ಸಿ.ಉಮಾ, ವೆಂಕಟರಾಮಯ್ಯ, ಟಿ.ರಘುನಾಥ್ ರೆಡ್ಡಿ, ಈಶ್ವರ ರೆಡ್ಡಿ ಉಪಸ್ಥಿತರಿದ್ದರು.