Chikkaballapur : ಮಂಗಳವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಕೋವಿಡ್-19ರ ಲಸಿಕೆಯ ಪ್ರಗತಿ ಪರಿಶೀಲನೆ ವಿಡಿಯೊ ಸಂವಾದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಭಾಗವಹಿಸಿ ಪ್ರಗತಿಯ ವಿವರ ನೀಡಿದರು. ಸೆಪ್ಟೆಂಬರ್ 17ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ವಿಶೇಷ ಲಸಿಕಾ ಮೇಳ ಆಯೋಜಿಸಿ ಮೊದಲ ಮತ್ತು 2ನೇ ಡೋಸ್ ಲಸಿಕೆ ಸೇರಿ ಒಟ್ಟು 70 ಸಾವಿರ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ನೀಡಿದರು.
ಗ್ರಾಮಾಂತರ ಪ್ರದೇಶವನ್ನು ಒಳಗೊಂಡಂತೆ ಗೌರಿಬಿದನೂರು – 20,000, ಚಿಂತಾಮಣಿ – 20,000, ಶಿಡ್ಲಘಟ್ಟ – 17,000, ಚಿಕ್ಕಬಳ್ಳಾಪುರ – 15,000, ಬಾಗೇಪಲ್ಲಿ – 10,000 ಮತ್ತು ಗುಡಿಬಂಡೆ ತಾಲ್ಲೂಕು – 3,000 ರಂತೆ ತಾಲ್ಲೂಕುವಾರು ಗುರಿ ನಿಗದಿಪಡಿಸಿ ಅದನ್ನು ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ಎಲ್ಲಾ ತಾಲ್ಲೂಕಿನ ತಹಸಿಲ್ದಾರ್ ಗಳು, ತಾ.ಪಂ ಇಒ ಗಳು ಉಪಸ್ಥಿತರಿದ್ದರು.