Chikkaballapur : ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ JDS ಸಮಾವೇಶ (Meeting) ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ” ನಮಗೂ ಮತ್ತು ಜನತಾದಳಕ್ಕೂ ಹಳೇ ಸಂಬಂಧ. ನಮ್ಮ ತಂದೆ ಅವಿಭಜಿತ ಕೋಲಾರ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರಾಗಿದ್ದರು. ನಾನು ಅಧಿಕಾರದಲ್ಲಿ ಇದ್ದ ವೇಳೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿಲ್ಲ. ಕೆಲವು ಸ್ಥಳೀಯ ಮುಖಂಡರ ಒತ್ತಾಯದಿಂದ ತೊಂದರೆ ನೀಡಿದ್ದರೆ ಜೆಡಿಎಸ್ ಕಾರ್ಯಕರ್ತರಲ್ಲಿ ಕ್ಷಮೆ ಕೋರುವೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕನಿಷ್ಠ 30 ರಿಂದ 40 ಸಾವಿರ ಜೆಡಿಎಸ್ ಮತಗಳು ಇವೆ. ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ದೊರೆಯಬೇಕು. ಬಿಜೆಪಿ ಮತ್ತು ಜೆಡಿಎಸ್ ಶಕ್ತಿ ಕಾಂಗ್ರೆಸ್‌ಗೆ ಗೊತ್ತಾಗಬೇಕು. ಜೆಡಿಎಸ್ ಕಾರ್ಯಕರ್ತರದ್ದು ಪಕ್ಷ ನಿಷ್ಠೆಯ ರಾಜಕಾರಣ. ಆ ಕಾರಣದಿಂದ ಕ್ಷೇತ್ರದಲ್ಲಿ ಜೆಡಿಎಸ್ ಬೆಳೆಯುತ್ತದೆ” ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಅಜ್ಜವಾರ ಕೆ.ಆರ್.ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕುಂಟಹಳ್ಳಿ ಮುನಿಯಪ್ಪ, ನಗರಸಭೆ ಸದಸ್ಯ ಮಟಮಪ್ಪ, ಮಾಜಿ ಸದಸ್ಯ ಕಿಸಾನ್ ಕೃಷ್ಣಪ್ಪ, ಮುಖಂಡರಾದ ಸಿ.ಆರ್.ನರಸಿಂಹ ಮೂರ್ತಿ, ಅಮರನಾಥ ರೆಡ್ಡಿ, ಬಂಡ್ಲು ಶ್ರೀನಿವಾಸ್, ನಾರಾಯಣಗೌಡ, ಪ್ರಭಾ ನಾರಾಯಣಗೌಡ, ಪಾರಿಜಾತಗೌಡ, ಶಿಲ್ಪಾಗೌಡ, ಎಚ್.ಎನ್.ನಾರಾಯಣ ಸ್ವಾಮಿ, ಗಿಡ್ನಹಳ್ಳಿ ನಾರಾಯಣ ಸ್ವಾಮಿ, ಯಲುವಳ್ಳಿ ಣ್ಣೇಗೌಡ, ಗೊಲ್ಲರಹಳ್ಳಿ ಮಂಜು, ಕೆ.ವಿ.ನಾಗರಾಜ್, ಮುನೇಗೌಡ ಹಾಗೂ ಪಕ್ಷದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.