Home Chikkaballapur ಜಿಲ್ಲೆಯಾದ್ಯಂತ ಇಂದಿನಿಂದ ಯುವಕರಿಗೆ Covid-19 ಲಸಿಕೆ ವಿತರಣೆ

ಜಿಲ್ಲೆಯಾದ್ಯಂತ ಇಂದಿನಿಂದ ಯುವಕರಿಗೆ Covid-19 ಲಸಿಕೆ ವಿತರಣೆ

0
Chikkaballapur District Covid-19 15 to 18 Years Vaccination

Chikkaballapur District: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ 65,648 ಯುವಕರಿಗೆ ಸರ್ಕಾರದ ನಿರ್ದೇಶನದಂತೆ Covaxin ಲಸಿಕೆ (Covid-19 Vaccine) ನೀಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು ಜನವರಿ 3 ಸೋಮವಾರದಿಂದ ‌ಮಕ್ಕಳು ಓದುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸ್ತುತ 65 ಶಾಲಾ ಕಾಲೇಜುಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸಾಂಕೇತಿಕವಾಗಿ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜಿನಲ್ಲಿ 10.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R Latha) ತಿಳಿಸಿದ್ದಾರೆ.

ಲಸಿಕೆ ಪಡೆಯುವ ಮಕ್ಕಳು ತಮ್ಮ ಆಧಾರ್ ಕಾರ್ಡ್ ತೋರಿಸಿ ಲಸಿಕೆ ಪಡೆಯಬಹುದು. ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಶಾಲಾ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಲಸಿಕೆ ಪಡೆಯಬಹುದು. ಲಸಿಕಾಕರಣದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಮಕ್ಕಳಿಗೆ ಲಸಿಕೆಯ ಕುರಿತು ಅರಿವು ಮೂಡಿಸಿ, ಮನವೊಲಿಸಿ ಪ್ರತಿ ಮಗುವು ಲಸಿಕೆಯನ್ನು ಪಡೆಯಲು ಪ್ರೇರೇಪಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾಧಿಸಿ ಸರ್ಕಾರ ನೀಡಿರುವ ಲಸಿಕೀಕರಣದ ಗುರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ತಾಲ್ಲೂಕುವಾರು ಲಸಿಕೆ ದೊರೆಯುವ ಸ್ಥಳಗಳು

ಬಾಗೇಪಲ್ಲಿ ತಾಲ್ಲೂಕು : ಬಾಗೇಪಲ್ಲಿ ಸರ್ಕಾರಿ ಪ್ರೌಢಶಾಲೆ, ಗೂಳೂರು, ಮಾರ್ಗಾನುಕುಂಟೆ, ಚಾಕವೇಲು, ಚೇಳೂರು, ಪಾತಪಾಳ್ಯ, ಶಿವಪುರ, ಮಿಟ್ಟೇಮರಿ, ಜಿ.ಮದ್ದೇಪಲ್ಲಿ ಕ್ರಾಸ್, ಜೂಲಪಾಳ್ಯ, ಬಿಳ್ಳೂರು. ಚಿಕ್ಕಬಳ್ಳಾಪುರ ತಾಲ್ಲೂಕು; ಜಿಲ್ಲಾ ಆಸ್ಪತ್ರೆ, ದಿಬ್ಬೂರು, ನಾಯನಹಳ್ಳಿ, ನಂದಿ, ಮುದ್ದೇನಹಳ್ಳಿ, ಪೆರೇಸಂದ್ರ, ಮಂಡಿಕಲ್.

ಚಿಂತಾಮಣಿ ತಾಲ್ಲೂಕು : ಚಿಂತಾಮಣಿ ಸರ್ಕಾರಿ ಪ್ರೌಢಶಾಲೆ, ಬಟ್ಲಹಳ್ಳಿ, ಬುರುಡುಗುಂಟೆ, ಚಿನ್ನಸಂದ್ರ, ಇರಗಂಪಲ್ಲಿ, ಕೈವಾರ, ಕೆಂಚಾರ್ಲಹಳ್ಳಿ, ಕುರುಬೂರು, ಮುರುಗಮಲೆ, ಸಂತೇಕಲ್ಲಹಳ್ಳಿ, ಯಗವಕೋಟೆ, ಕೋಟಗಲ್ಲು.

ಗೌರಿಬಿದನೂರು ತಾಲ್ಲೂಕು : ಸರ್ಕಾರಿ ಪ್ರೌಢಶಾಲೆ ಗೌರಿಬಿದನೂರು, ಅಲಕಾಪುರ, ಅಲೀಪುರ, ಹೊಸೂರು, ಇಡಗೂರು, ಜಗರೆಡ್ಡಿಹಳ್ಳಿ, ಮಂಚೇನಹಳ್ಳಿ, ನಕ್ಕಲಹಳ್ಳಿ, ನ್ಯಾಮಗೊಂಡ್ಲು, ತೊಂಡೆಬಾವಿ, ವಾಟದ ಹೊಸಹಳ್ಳಿ, ಕುರುಡಿ, ರಾಂಪುರ, ವಿದುರಾಶ್ವತ, ಹುದಗೂರು, ನಗರಗೆರೆ, ಡಿ.ಪಾಳ್ಯ, ಕಲ್ಲಿನಾಯಕನಹಳ್ಳಿ, ಗೆದರೆ. ಗುಡಿಬಂಡೆ ತಾಲ್ಲೂಕು; ಸರ್ಕಾರಿ ಪ್ರೌಢಶಾಲೆ ಗುಡಿಬಂಡೆ, ಬೀಚಗಾನಹಳ್ಳಿ, ಹಂಪಸಂದ್ರ, ಎಲ್ಲೋಡು.

ಶಿಡ್ಲಘಟ್ಟ ತಾಲ್ಲೂಕು : ಸರ್ಕಾರಿ ಪ್ರೌಢಶಾಲೆ ಶಿಡ್ಲಘಟ್ಟ, ಬಶೆಟ್ಟಿಹಳ್ಳಿ, ದಿಬ್ಬೂರಹಳ್ಳಿ, ಈ.ತಿಮ್ಮಸಂದ್ರ, ಗಂಜಿಗುಂಟೆ, ಎಮ್ಮಾರಲಹಳ್ಳಿ, ಜಂಗಮಕೋಟೆ, ಕುಂದಲಗುರ್ಕಿ, ಮುತ್ತುಗದಹಳ್ಳಿ, ಮೇಲೂರು, ಸಾದಲಿ ಮತ್ತು ವೈ.ಹುಣಸನಹಳ್ಳಿ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version