Home News Chikkaballapur ವಿಕಲಚೇತನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

ವಿಕಲಚೇತನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

0
DC G Prabhu disabled welfare grievance review meeting Chikkaballapur

ಚಿಕ್ಕಬಳ್ಳಾಪುರ: ವಿಕಲಚೇತನರ ಕುಂದುಕೊರತೆಗಳನ್ನು ಆಲಿಸಿ ತಾಲ್ಲೂಕು ಹಂತದಲ್ಲಿಯೇ ಪರಿಹರಿಸಬೇಕು, ಸಭೆ ನಡೆಸಲು ವಿಫಲರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದ್ದಾರೆ.

Quick facts: DC G. Prabhu chaired the district disabled-welfare grievance meeting, ordering ramp audits at government offices, a job fair within a month, scholarship registration for 22,000 disabled residents, and land for a rehabilitation centre.

ಸಭೆಯಲ್ಲಿ ಏನೆಲ್ಲ ಸೂಚನೆ ನೀಡಿದರು?

ಇಲ್ಲಿನ ಜಿಲ್ಲಾ ಪಂಚಾಯತ್ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ವಿಕಲಚೇತನರು ಪ್ರತಿ ಬಾರಿ ಸಮಸ್ಯೆಗಾಗಿ ಜಿಲ್ಲಾ ಕಚೇರಿಗೆ ಬರುವ ಪರಿಸ್ಥಿತಿ ಇರಬಾರದು, ತಾಲ್ಲೂಕು ಹಂತದಲ್ಲೇ ಸೌಲಭ್ಯ ಒದಗಿಸಬೇಕು ಎಂದರು. ಪ್ರತಿ ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಯಲ್ಲಿ ರ್ಯಾಂಪ್ ಅಥವಾ ಲಿಫ್ಟ್ ಇರಬೇಕು; ಸೌಲಭ್ಯ ಇಲ್ಲದ ಕಚೇರಿಗಳ ಪಟ್ಟಿ ಸಲ್ಲಿಸುವಂತೆ ಹಾಗೂ ಹೊಸ ಸರ್ಕಾರಿ ಕಟ್ಟಡ ಕಾಮಗಾರಿಗಳಲ್ಲಿ ರ್ಯಾಂಪ್ ಅಳವಡಿಕೆಯ ದೃಢೀಕರಣ ಪತ್ರ ಪಡೆಯುವಂತೆ ನಿರ್ದೇಶಿಸಿದರು.

ಉದ್ಯೋಗ, ವಿದ್ಯಾರ್ಥಿವೇತನ ಬಗ್ಗೆ ಏನೆಂದರು?

ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಒಂದು ತಿಂಗಳೊಳಗೆ ಉದ್ಯೋಗ ಮೇಳ ಆಯೋಜಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗೆ ಸೂಚಿಸಿದರು. ಜಿಲ್ಲೆಯ 22 ಸಾವಿರ ವಿಕಲಚೇತನರ ಪೈಕಿ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ಯೋಜನೆಗಳಡಿ ನೋಂದಣಿಗೆ ಅರಿವು ಮೂಡಿಸಬೇಕು, ಮೊಬೈಲ್ ಕ್ಲಿನಿಕ್ ಮೂಲಕ ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು ಹಾಗೂ ವಿಕಲಚೇತನ ಸ್ನೇಹಿ ಬಸ್ ಸೌಲಭ್ಯಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆಯ ಶೇ.5ರಷ್ಟು ಮೊತ್ತದಡಿ ಸುಮಾರು 2,000 ವಿಕಲಚೇತನರಿಗೆ ಸಾಧನ-ಸಲಕರಣೆ ವಿತರಿಸಲು ಸೂಚಿಸಿದರು.

ಪುನರ್ವಸತಿ ಕೇಂದ್ರ, ಬ್ಯಾಂಕ್ ಸಾಲದ ಬಗ್ಗೆ ಏನೆಂದರು?

ಜಿಲ್ಲಾ ಕೇಂದ್ರದಲ್ಲಿ ವಿಕಲಚೇತನರ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಸಾಲ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಸಾಲ ನೀಡಲು ಕೆಲವು ಬ್ಯಾಂಕುಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಸಭೆ ಕರೆಯುವಂತೆ ಸೂಚಿಸಿದರು. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಮುಂದಿನ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವಂತೆಯೂ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತೀಕ್ ಪಾಷ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

What did DC G. Prabhu order regarding ramps?
Every government office and hospital without a ramp or lift must be listed, and new government building works must be certified for ramp installation.
What employment and education steps were announced?
A job fair for disabled persons within a month, and outreach to register the district’s disabled students for scholarships.
What is planned for disabled-friendly infrastructure?
Land will be identified for a rehabilitation centre at the district headquarters, and a proposal for disabled-friendly buses will be sent to the government.

Stay tuned for more local updates.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version