Home News Chikkaballapur ಅಕ್ರಮ ಗಣಿಗಾರಿಕೆಗೆ ಜಂಟಿ ಕಾರ್ಯಾಚರಣೆ: ಜಿಲ್ಲಾಧಿಕಾರಿ ಜಿ. ಪ್ರಭು ಸೂಚನೆ

ಅಕ್ರಮ ಗಣಿಗಾರಿಕೆಗೆ ಜಂಟಿ ಕಾರ್ಯಾಚರಣೆ: ಜಿಲ್ಲಾಧಿಕಾರಿ ಜಿ. ಪ್ರಭು ಸೂಚನೆ

0
DC G Prabhu illegal mining crackdown meeting Chikkaballapur

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುವುದು ಕಂಡುಬಂದರೆ ಗಣಿ ಮತ್ತು ಭೂವಿಜ್ಞಾನ, ಸಾರಿಗೆ, ಪೊಲೀಸ್ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಸೂಚಿಸಿದ್ದಾರೆ.

Quick facts: DC G. Prabhu directed a joint crackdown by mining, transport, police and revenue departments after farmers near Mandikallu hobli complained of dust, damaged roads and crop losses from stone-crushing units.

ರೈತರ ದೂರೇನು?

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣಿಗಾರಿಕೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಅಹವಾಲು ಆಲಿಸಿದ ಬಳಿಕ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಸೂಚನೆ ನೀಡಿದರು. ಮಂಡಿಕಲ್ಲು ಹೋಬಳಿ ಸುತ್ತಮುತ್ತಲಿನ ಕಲ್ಲುಪುಡಿ ಘಟಕಗಳಿಂದ ಉಂಟಾಗುತ್ತಿರುವ ಧೂಳು, ಟಿಪ್ಪರ್ ಲಾರಿಗಳ ಸಂಚಾರದಿಂದ ಹಾಳಾಗುತ್ತಿರುವ ರಸ್ತೆಗಳು ಹಾಗೂ ಕೃಷಿ ಬೆಳೆಗಳಿಗೆ ಆಗುತ್ತಿರುವ ಹಾನಿ ಕುರಿತು ರೈತರು ಅಹವಾಲು ಸಲ್ಲಿಸಿದರು. ಟಿಪ್ಪರ್ ಲಾರಿಗಳ ನಿರಂತರ ಸಂಚಾರದಿಂದ ಅಪಘಾತಗಳೂ ಸಂಭವಿಸುತ್ತಿವೆ ಎಂದು ಅವರು ಗಮನಕ್ಕೆ ತಂದರು.

ಧೂಳು ನಿಯಂತ್ರಣಕ್ಕೆ ಯಾವ ಕ್ರಮ?

ಧೂಳಿನ ಸಮಸ್ಯೆ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ಒಂದು ವಾರದೊಳಗೆ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಕಲ್ಲುಪುಡಿ ಘಟಕಗಳ ಮಾಲೀಕರ ಸಭೆ ನಡೆಸಿ, ತಕ್ಷಣ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಬೇಕು ಎಂದು ನಿರ್ದೇಶಿಸಿದರು. ಕ್ವಾರಿ ಸಂಪರ್ಕ ರಸ್ತೆಗಳಲ್ಲಿ ನಿಯಮಿತವಾಗಿ ನೀರು ಸಿಂಪಡಿಸಬೇಕು, ಮರಳು-ಜಲ್ಲಿ ಸಾಗಿಸುವ ವಾಹನಗಳಿಗೆ ವೇಗ ನಿಯಂತ್ರಕ ಮತ್ತು ಸ್ಪೀಡೋಮೀಟರ್ ಅಳವಡಿಸಬೇಕು ಎಂದೂ ಸೂಚಿಸಿದರು. ಕಾನೂನು ಉಲ್ಲಂಘನೆ ಪತ್ತೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾ ಅಳವಡಿಕೆ ಕುರಿತೂ ಕ್ರಮ ಕೈಗೊಳ್ಳಬೇಕು ಎಂದರು.

ಗಣಿ ಮಾಲೀಕರಿಗೆ ಎಚ್ಚರಿಕೆ ಏನು?

ಬೆಂಗಳೂರು ಉತ್ತರ ಭಾಗಕ್ಕೆ ಜಿಲ್ಲೆಯಿಂದ ಶೇ 50ರಷ್ಟು ಗಣಿ ಉತ್ಪನ್ನಗಳು ಪೂರೈಕೆಯಾಗುತ್ತಿದ್ದು, ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದು ಎಂದ ಜಿಲ್ಲಾಧಿಕಾರಿ, ಗಣಿಗಾರಿಕೆ ಸಂದರ್ಭದಲ್ಲಿ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಣಿ ಮಾಲೀಕರಿಗೆ ತಿಳಿಸಿದರು. “ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಈ ವಿಚಾರದಲ್ಲಿ ಯಾವುದೇ ಒತ್ತಡಕ್ಕೂ ಒಳಗಾಗುವ ಪ್ರಶ್ನೆಯೇ ಇಲ್ಲ” ಎಂದು ಎಚ್ಚರಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

What did farmers complain about near Mandikallu hobli?
Dust and damage from stone-crushing units, road damage from constant tipper lorry traffic, and resulting crop and cattle-fodder losses.
What action did DC G. Prabhu order?
A joint crackdown by mining, transport, police and revenue departments against illegal mining, plus mandatory water-spraying on quarry roads and speed governors on sand/jelly-carrying vehicles.
What is planned for the coming week?
The sub-divisional officer will chair a meeting with farmers and stone-crushing unit owners within a week to hear grievances and identify immediate steps.

Stay tuned for more local updates.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version