Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರೆಡ್ಡಿ ಸಮುದಾಯದ ಆಶ್ರಯದಲ್ಲಿ ಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು (Hemareddy Mallamma Jayanti) ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ “14ನೇ ಶತಮಾನದಲ್ಲಿ ಶರಣರ ಕ್ರಾಂತಿಯ ಪ್ರಮುಖ ರೂವಾರಿಗರಾದ ಹೇಮರಡ್ಡಿ ಮಲ್ಲಮ್ಮರವರು ಶ್ರೀಶೈಲ ಮಲ್ಲಿಕಾರ್ಜುನನನ್ನು ತಮ್ಮ ಆರಾಧ್ಯದೇವರಾಗಿ ಪೂಜಿಸುತ್ತಿದ್ದರು. ಸರಳ ಹಾಗೂ ದಿಟ್ಟತನದ ತನ್ನ ಭಕ್ತಿಯಿಂದ ದೈವತ್ವವನ್ನು ಕಂಡ ಮಹಾನ್ ಶರಣೆಯ ಆದರ್ಶಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೆಡ್ಡಿ ಸಮುದಾಯದ ಗೌರವಾಧ್ಯಕ್ಷ ನಾಗರಾಜು ರೆಡ್ಡಿ, ತಾಲ್ಲೂಕು ಅಧ್ಯಕ್ಷ ಅಂಜನ್ ರೆಡ್ಡಿ, ಉಪಾಧ್ಯಕ್ಷ ಶಿವಣ್ಣ, ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur