Home News Chikkaballapur ದರೋಡೆ ಪ್ರಕರಣ : ಮೂವರ ಬಂಧನ

ದರೋಡೆ ಪ್ರಕರಣ : ಮೂವರ ಬಂಧನ

0
Chikkaballapur Bagepalli Gudibande Kadehalli Robbery Police Arrest

Chikkaballapur : ಗುಡಿಬಂಡೆ (Gudibande) ಮತ್ತು ಬಾಗೇಪಲ್ಲಿ (Bagepalli) ನಡುವಿನ ಕಡೇಹಳ್ಳಿ (Kadehalli) ಕ್ರಾಸ್‌ ಬಳಿ ನಡೆದ ದರೋಡೆ (Robbery) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) ಗೌರಿಬಿದನೂರು ತಾಲ್ಲೂಕಿನ ಹೊಸೂರಿನ ಈಡಿಗರಪೇಟೆಯ ಶ್ರೀನಿವಾಸ್ (20), ಹಿಂದೂಪುರ ತಾಲ್ಲೂಕಿನ ಚೌಳೂರಿನ ಮಹೇಶ್ (30), ಮಂಜುನಾಥ್ (23) ಎಂಬುವವರನ್ನು ಬಂಧಿಸಿದ್ದಾರೆ (Arrest).

ಕಡೇಹಳ್ಳಿ ಕ್ರಾಸ್‌ಬಳಿ ಗುಡಿಬಂಡೆಯ ನರೇಂದ್ರ, ಅವರ ಪತ್ನಿ ವತ್ಸಲ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ, ಲಾಂಗ್ ತೋರಿಸಿ ಚಿನ್ನದ ಸರ ಹಾಗೂ ₹ 1೦೦೦ ದೋಚಿದ್ದರು. ಈ ಬಗ್ಗೆ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ವಿರುದ್ಧ ಈ ಮೊದಲೇ ಗೌರಿಬಿದನೂರು, ಮಧುಗಿರಿ, ಮಿಡಿಗೇಶಿ, ಕೊರಟಗೆರೆ, ಹಿಂದೂಪುರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

SP ಡಿ.ಎಲ್.ನಾಗೇಶ್ ಮಾರ್ಗದರ್ಶನದಲ್ಲಿ DySP ವಿ.ಕೆ.ವಾಸುದೇವ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳಾದ ಲಿಂಗರಾಜು, ನಾಗರಾಜು, ಸಿಬ್ಬಂದಿ ಕರಿಬಾಬು, ಆನಂದ್, ದಕ್ಷಿಣ ಮೂರ್ತಿ, ಕುಮಾರ್ ನಾಯಕ್, ಆನಂದ್‌ಕುಮಾರ್, ನರೇಂದ್ರ, ಮಂಜುನಾಥ್, ಸುನೀಲ್ ಕುಮಾರ್, ಅಬ್ದುಲ್, ಅವಿನಾಶ್, ರಮೇಶ್, ಸಂತೋಷ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version