Home Sidlaghatta ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸ್

ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸ್

0

Sidlaghatta : ಕಳ್ಳತನ ಮತ್ತು ಸುಲಿಗೆ (Robbery) ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು (Police) ಬಂಧಿಸುವಲ್ಲಿ (Arrest) ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಅಶೋಕ್ (29), ಚರಣ್ ಕುಮಾರ್ (25), ಅಖಿಲ್ ಕುಮಾರ್ ಬಂಧಿತ ಆರೋಪಿಗಳು.

ಕಳೆದ ಜುಲೈ 27 ರಂದು ಆಂಧ್ರ ಮೂಲದ ವೆಂಕಟಸುಬ್ಬಾರೆಡ್ಡಿ ತನ್ನ ಪತ್ನಿ ಮಗನೊಂದಿಗೆ ತಮ್ಮ ಕಾರಿನಲ್ಲಿ ಮೈಸೂರಿಗೆ ಹೋಗಿ ವಾಪಸ್ಸು ಬರುತ್ತಿದ್ದಾಗ ನಡುವೆ ಶಿಡ್ಲಘಟ್ಟ ತಾಲ್ಲೂಕು ಜೆ.ವೆಂಕಟಾಪುರ ಗ್ರಾಮದ ಸಮೀಪ, ಬಿ.ಎಲ್.ಪಿ.ಯೋಗಿತಾ ನರ್ಸರಿ ಫಾರಂ ಬಳಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ, ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಕಲ್ಲು ಮತ್ತು ದೊಣ್ಣೆಯಿಂದ ಕಾರಿನ ಗ್ಲಾಸ್‌ಗಳನ್ನು ಹೊಡೆದು ಸುಲಿಗೆಕೋರರು, ವೆಂಕಟಸುಬ್ಬರೆಡ್ಡಿ ಅವರ ಕತ್ತಿನ ಮೇಲೆ ಚಾಕುವನ್ನು ಇಟ್ಟು ಬೆದರಿಸಿ ಇಪ್ಪತ್ತು ಸಾವಿರ ರೂ ನಗದು ಹಣ ಮತ್ತು 2 ಬಂಗಾರದ ಉಂಗುರಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ರಸ್ತೆಗಳಲ್ಲಿ ಜನರಿಗೆ ಹರಿತವಾದ ಆಯುಧಗಳನ್ನು ತೋರಿಸಿ ಬೆದರಿಸಿ, ಹಣ ಮತ್ತು ಬಂಗಾರದ ಒಡವೆ ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಬಂಗಾರದ ಉಂಗುರುಗಳು ಮತ್ತು ಇತಿಯಾಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಚಿಂತಾಮಣಿ ಉಪವಿಭಾಗದ ಎ.ಎಸ್.ಪಿ ಕುಶಲ್ ಚೌಕ್ಸಿ ಮಾರ್ಗದರ್ಶನದಲ್ಲಿ ಶಿಡ್ಲಘಟ್ಟ ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತೃತ್ವದ ಅಪರಾಧ ತಂಡದ ಕಾರ್ಯಾಚರಣೆಯಲ್ಲಿ ಪಿಎಸ್ಐ ಹರೀಶ್ ಸಿಬ್ಬಂದಿ ನಂದಕುಮಾರ್, ಮಂಜುನಾಥ, ಕೃಷ್ಣ ಮತ್ತು ಸುನಿಲ್ ಕುಮಾರ್ ರವರುಗಳು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version