Chikkaballapur : ಚಿಕ್ಕಬಳ್ಳಾಪುರ KSRTC ವಿಭಾಗದ ಕಾರ್ಯಾಗಾರದಲ್ಲಿ (Chikkaballapur KSRTC division’s workshop) ಈವರೆಗೆ 14 ಬಸ್ಸುಗಳ ಕವಚ ಪುನಶ್ಚೇತನ ಮಾಡಲಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಭಾಗದ ಕೆಎಸ್ಆರ್ಸಿಟಿಸಿ ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಹಾಗೂ ಅವರ ತಂಡಕ್ಕೆ ₹1 ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಿ, ಮೆಚ್ಚುಗೆ (appreciation) ವ್ಯಕ್ತಪಡಿಸಲಾಯಿತು.
ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ವಿಭಾಗದ ಕಾರ್ಯಾಗಾರದಲ್ಲಿ ಇದೇ ಮೊದಲ ಬಾರಿಗೆ ಹಳೆ ಸಾರಿಗೆ ವಾಹನಗಳನ್ನು ಹೊಸದಾಗಿ ಕವಚ ನಿರ್ಮಾಣ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಎಂ.ಆರ್. ಶ್ರೀನಿವಾಸ ಮೂರ್ತಿ ಹಾಗೂ ಸಾರಿಗೆ ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.