Chikkaballapur : ಚಿಕ್ಕಬಳ್ಳಾಪುರ ಲೋಕಸಭಾ (Lokasabha) ಕ್ಷೇತ್ರದಲ್ಲಿ ನಾಮಪತ್ರ (Nomination) ಸಲ್ಲಿಸಲು ಕೊನೆಯ ದಿನವಾದ ಗುರುವಾರ ಒಟ್ಟು 16 ಅಭ್ಯರ್ಥಿಗಳು ಒಟ್ಟು 17 ನಾಮಪತ್ರಗಳನ್ನು ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಅವರಿಗೆ ಸಲ್ಲಿಸಿದರು. ಇದುವರೆಗೆ ಒಟ್ಟು 36 ಅಭ್ಯರ್ಥಿಗಳು 43 ನಾಮಪತ್ರ ಸಲ್ಲಿಸಿದ್ದಾರೆ.
ಗುರುವಾರ ಬಿಜೆಪಿಯಿಂದ ಡಾ.ಕೆ.ಸುಧಾಕರ್ ಸಹ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು ಪಕ್ಷೇತರ ಅಭ್ಯರ್ಥಿಗಳಾದ ಎಚ್.ಸಿ. ಚಂದ್ರಶೇಖರ್, ರಾಮನಾಯ್ಕ ಸಹ ಎರಡನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಪುಲೆ) ಅಭ್ಯರ್ಥಿಯಾಗಿ ಟಿ.ಆರ್. ನಾರಾಯಣರಾವ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಡಿ.ಇ. ಮಾರುತಿ ಪ್ರಸನ್ನ ಕುಮಾರ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ನಾರಾಯಣಸ್ವಾಮಿ ಬಿ.ಎಂ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ರಾಜಾರೆಡ್ಡಿ, ಇಂಡಿಯನ್ ಮೂವ್ ಮೆಂಟ್ ಪಾರ್ಟಿ ಯಿಂದ ಜಿ.ಎನ್. ಕೋದಂಡರೆಡ್ಡಿ, ಉತ್ತಮ ಪ್ರಜಾಕೀಯ ಪಕ್ಷದಿಂದ ವೆಂಕಟೇಶ ಮೂರ್ತಿ ವಿ,ಪಕ್ಷೇತರ ಅಭ್ಯರ್ಥಿಗಳಾಗಿ ಸಂದೇಶ್ ಜಿ, ಟಿ.ವೆಂಕಟಶಿವುಡು, ಸಿ.ವಿ ಲೋಕೇಶ್ ಗೌಡ, ನರಸಿಂಹಮೂರ್ತಿ ವಿ.ಎನ್., ವೆಂಕಟೇಶಪ್ಪ .ಎನ್., ವಲಸಪಲ್ಲಿ ಉತ್ತಪ್ಪ, ರಾಮಯ್ಯ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿಗಳ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ ಪ್ರತಿಯನ್ನು ಭಾರತ ಚುನಾವಣಾ ಆಯೋಗದ https://affidavit.eci.gov.in ಪೋರ್ಟಲ್‌ನಲ್ಲಿ ಆಪ್ ಲೋಡ್ ಮಾಡಲಾಗಿದ.