Chikkaballapur : ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸೇರಿ ಹಲವು ಇಲಾಖೆಗಳಿಂದ ಆಪರೇಷನ್ ಅಭ್ಯಾಸ (Operation Abhyas Mock Drill) ನಡೆಸಲಾಯಿತು. ಬಸ್ ನಿಲ್ದಾಣದಲ್ಲಿ ಸಹಸ್ರಾರು ಜನರ ಮುಂದೆ ನಡೆದ ಈ ಅಭ್ಯಾಸ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಅಚ್ಚರಿಯ ಸಂದರ್ಭವಾಯಿತು.
ಭಯೋತ್ಪಾದಕ ಆಕ್ರಮಣ, ಶಂಕಾಸ್ಪದ ಬ್ಯಾಗ್, ಅಗ್ನಿ ದುರಂತ, ಬಾಂಬ್ ದಾಳಿ, ಡ್ರೋಣ್ ಆಕ್ರಮಣ ಇತ್ಯಾದಿ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಕೌಶಲ್ಯ ಪ್ರದರ್ಶನ ನೀಡಲಾಯಿತು. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ಸಿಬ್ಬಂದಿ, ಗೃಹರಕ್ಷಕ ದಳ ಹಾಗೂ ಎಸ್‌ಡಿಆರ್‌ಎಫ್ ಸಹ ಪಾಲ್ಗೊಂಡಿದ್ದರು.
ಡಿಸಿ ಪಿ.ಎನ್. ರವೀಂದ್ರ ಮಾತನಾಡಿ, “ಸರ್ಕಾರದ ನಿರ್ದೇಶನದಂತೆ ಈ ಅಭ್ಯಾಸ ಕೈಗೊಳ್ಳಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಬೇಕು” ಎಂದು ಹೇಳಿದರು.
ಎಸ್‌ಪಿ ಕುಶಾಲ್ ಚೌಕ್ಸೆ, ಎಎಸ್‌ಪಿ ಜಗನ್ನಾಥ್ ರೈ, ಎಡಿಸಿ ಡಾ.ಎನ್.ಭಾಸ್ಕರ್ ಸೇರಿದಂತೆ ಅಧಿಕಾರಿಗಳು ಕಾರ್ಯಾಚರಣೆಗೆ ವೀಕ್ಷಕರಾಗಿದ್ದರು.