Chikkaballapur : ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಉಪಾಧಿವಂತರ ಒಕ್ಕೂಟದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಂಡಿಕಲ್ ಗ್ರಾಮದ ಎಂ. ರಾಮಕೃಷ್ಣ ಅವರನ್ನು ಒಕ್ಕೂಟದ ರಾಜ್ಯ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇಮಕ ಮಾಡಿದರು.
ನನ್ನ ಅಧಿಕಾರ ಅವಧಿಯಲ್ಲಿ ಜಿಲ್ಲೆಯ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಅರ್ಚಕರ ಸಮಸ್ಯೆಗಳು ಪರಿಹಾರಕ್ಕೆ ಶ್ರಮಿಸುವೆ. ನನ್ನ ನೇಮಕಕ್ಕೆ ಕಾರಣರಾದ ಜಿಲ್ಲೆಯ ಎಲ್ಲ ಅರ್ಚಕರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರಾಮಕೃಷ್ಣ ಹೇಳಿದರು.
ಎಂ. ರಾಮಕೃಷ್ಣ ಅವರನ್ನು ಒಕ್ಕೂಟದ ಸದಸ್ಯರು ಹಾಗೂ ಅರ್ಚಕರು ಅಭಿನಂದಿಸಿದರು.