Chikkaballapur : ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಶನಿಮಹಾದೇವ ದೇಗುಲದಲ್ಲಿ ಭಕ್ತನೊಬ್ಬನ ಪ್ಯಾಂಟ್ ಜೇಬಿನಲ್ಲಿದ್ದ ಹಣ ಮಾಡಿದ ಪ್ರಕರಣದಲ್ಲಿ ಪೊಲೀಸರು ಒಡಿಶಾ ಮೂಲದ ಯುವಕನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಒಡಿಶಾದ ದಾಸ್ ಓಂ (23) ಎಂದು ಗುರುತಿಸಲಾಗಿದೆ. ತಾಲ್ಲೂಕಿನ ದಿಬ್ಬೂರು ಗ್ರಾಮದ ಡಿ.ಕೆ. ಮುನಿರಾಜು ಶನಿಮಹಾತ್ಮ ದೇಗುಲಕ್ಕೆ ದರ್ಶನಕ್ಕಾಗಿ ಬಂದಾಗ ಹೆಚ್ಚಿನ ಜನಸಂದಣಿಯ ಮಧ್ಯೆ ಅವರ ಜೇಬಿನಲ್ಲಿದ್ದ ಹಣ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಗೆ ಅವರು ದೂರು ಸಲ್ಲಿಸಿದ್ದರು.
ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಅವರಿಂದ ₹5 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.
