Home Chikkaballapur ಚಿಕ್ಕಬಳ್ಳಾಪುರ ಉತ್ಸವ : ವಾಹನ ಸಂಚಾರ ಮಾರ್ಗ ಬದಲಾವಣೆ

ಚಿಕ್ಕಬಳ್ಳಾಪುರ ಉತ್ಸವ : ವಾಹನ ಸಂಚಾರ ಮಾರ್ಗ ಬದಲಾವಣೆ

0

Chikkaballapur : ಚಿಕ್ಕಬಳ್ಳಾಪುರ ಉತ್ಸವದ (Chikkaballapura Utsava) ಹಿನ್ನೆಲೆಯಲ್ಲಿ KSRTC ಬಸ್‌ಗಳು, ಖಾಸಗಿ ಬಸ್‌ಗಳು, ಸರಕು ಸಾಗಾಣಿಕೆಯ ವಾಹನಗಳ ಮಾರ್ಗವನ್ನು ಜನವರಿ 7ರ ಬೆಳಿಗ್ಗೆ 7 ರಿಂದ ಜನವರಿ 14ರ ರಾತ್ರಿ 11 ರವರೆಗೆ ಬದಲಾವಣೆ (Traffic Diversion) ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

7 ರಂದು ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ ಗೌರಿಬಿದನೂರು (Gauribidanur) ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಬರುವ ವಾಹನಗಳು ಕಣಜೇನಹಳ್ಳಿ ಬಳಿ ಬಲ ತಿರುವು ಪಡೆದು ಕಳವಾರ, ಮುದ್ದೇನಹಳ್ಳಿ, ತಿರ್ನಹಳ್ಳಿ ಕ್ರಾಸ್, ನಂದಿ ಕ್ರಾಸ್ ಹಾದು ರಾಷ್ಟ್ರೀಯ ಹೆದ್ದಾರಿ ಮೂಲಕ ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ನಗರಕ್ಕೆ ವಾಪಸಂದ್ರದ ಮೂಲಕ ಪ್ರವೇಶಿಸಬೇಕು.

ಗೌರಿಬಿದನೂರು ಕಡೆಗೆ ಸಂಚರಿಸುವ ವಾಹನಗಳು ವಾಪಸಂದ್ರ ಸೇತುವೆ ಬಳಿ ಬಲತಿರುವು ಪಡೆದು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿ ನಂದಿ ಕ್ರಾಸ್‌ನಲ್ಲಿ ಬಲತಿರುವು, ನಂದಿ, ತಿರ್ನಹಳ್ಳಿ ಕ್ರಾಸ್, ಮುದ್ದೇನಹಳ್ಳಿ, ಕಳವಾರ, ಕಣಜೇನಹಳ್ಳಿ ಬಳಿ ಎಡತಿರುವುದ ಪಡೆದು ಗೌರಿಬಿದನೂರಿಗೆ ಸಂಚರಿಸಬೇಕು.

ಚಿಕ್ಕಬಳ್ಳಾಪುರ ನಗರದಿಂದ ಬೆಂಗಳೂರು (Bengaluru) ನಗರಕ್ಕೆ ಹೋಗಲು ವಾಪಸಂದ್ರ ಮೇಲ್ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಬೇಕು. ಬೆಂಗಳೂರು ನಗರದಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಬಸ್‌ಗಳು ಹಾಗೂ ಭಾರಿ ವಾಹನಗಳು ವಾಪಸಂದ್ರ ಮೇಲ್ಸೇತುವೆ ಮಾರ್ಗವಾಗಿ ಡಿಪೋ ರಸ್ತೆಯ ಮೂಲಕ ಬರಬಹುದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Chikkaballapura Utsava 2023 traffic diversion

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version