Home News Chikkaballapur ಮಕ್ಕಳ ಅಥ್ಲೆಟಿಕ್ ಕೂಟ-2023 ಕ್ರೀಡಾಕೂಟಕ್ಕೆ ಜಿಲ್ಲಾ ತಂಡ ಆಯ್ಕೆ

ಮಕ್ಕಳ ಅಥ್ಲೆಟಿಕ್ ಕೂಟ-2023 ಕ್ರೀಡಾಕೂಟಕ್ಕೆ ಜಿಲ್ಲಾ ತಂಡ ಆಯ್ಕೆ

0
Children's Athletic Conference-2023 Chikkaballapur Team Selection

Chikkaballapur : ಎರಡನೇ ರಾಷ್ಟ್ರೀಯ ಜಾವೆಲಿನ್ ಥ್ರೋ ಡೇ ಸ್ಪರ್ಧೆ (National Javelin Throw Day Competition) ಮತ್ತು ಮಕ್ಕಳ ಮಕ್ಕಳ ಅಥ್ಲೆಟಿಕ್ ಕೂಟ-2023ಕ್ಕೆ (Children’s Athletic Conference-2023) ಚಿಕ್ಕಬಳ್ಳಾಪುರ ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್ 6 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಒಟ್ಟು 113 ಪ್ರತಿಭಾವಂತ ಕ್ರೀಡಾಪಟುಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಯ್ಕೆ ಪ್ರಕ್ರಿಯೆಯು ಸರ್ ಎಂ.ವಿ. ಕ್ರೀಡಾಂಗಣ ನಡೆದಿದ್ದು ಆಯ್ಕೆಯಾದ ಅಥ್ಲೀಟ್‌ಗಳಲ್ಲಿ ಎಂಟು ವರ್ಷ ವಯೋಮಿತಿಯಲ್ಲಿ ಏಳು, 10 ವರ್ಷದ ವಯೋಮಿತಿಯಲ್ಲಿ 18, 12 ವರ್ಷದ ವಯೋಮಿತಿಯಲ್ಲಿ 31, 14 ವರ್ಷದ ವಯೋಮಿತಿಯಲ್ಲಿ 28, 16 ವರ್ಷ ವಯೋಮಿತಿಯಲ್ಲಿ 16, 18 ವರ್ಷ ವಯಸ್ಸಿನ ಗುಂಪಿನಲ್ಲಿ ಆರು, 20 ವರ್ಷ ವಯಸ್ಸಿನ ವಯೋಮಿತಿಯಲ್ಲಿ ಮೂರು, ಮತ್ತು ಹಾಗೂ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ನಾಲ್ಕು ಕ್ರೀಡಾಪಟುಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡದ ಜೊತೆ ಮುಖ್ಯ ತರಬೇತಿದಾರರಾಗಿ ಮಂಚನಬಲೆ ಶ್ರೀನಿವಾಸ್ ಮತ್ತು ಕ್ರೀಡಾ ತರಬೇತಿದಾರರಾಗಿ ಭರತ್‍ಕುಮಾರ್, ಸುನೀಲ್ ಅವರು ಮತ್ತು ತಂಡದ ವ್ಯವಸ್ಥಾಪಕರಾಗಿ ಮಂಚನಬಲೆ ಬಿ.ಜಿ.ಎಸ್.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚನ್ನಕೃಷ್ಣಪ್ಪ, ಚಿಂತಾಮಣಿಯ ಇಸ್ಸಾಕ್ ಅಹಮದ್, ವಿಷ್ಣುಪ್ರಿಯ ಕಾಲೇಜಿನ ರಂಜಿತ್ ತೆರಳುತ್ತಿದ್ದಾರೆ.

ಈ ಕ್ರೀಡಾಪಟುಗಳಿಗೆ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಶುಭ ಹಾರೈಸಿದ್ದು, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ತಂದುಕೊಡಲಿ ಎಂದು ಹಾರೈಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version