Chintamani : ಶನಿವಾರ ಚಿಂತಾಮಣಿ ನಗರದ ಸ್ಮೈಲ್ ಟ್ರಸ್ಟ್ ಮತ್ತು ಲಯನ್ಸ್ ಸಂಸ್ಥೆ ವತಿಯಿಂದ ನೆಕ್ಕುಂದಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ (Children’s Day) ಅಂಗವಾಗಿ ಉಚಿತ ಲೇಖನ ಸಾಮಗ್ರಿ ವಿತರಣೆ ಹಾಗೂ ಉಚಿತ ದಂತಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ” ನೆಹರು ಅವರಿಗೆ ಮಕ್ಕಳೆಂದರೆ ಪ್ರಾಣ ಆದ್ದರಿಂದ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಪಂಡಿತ್ ಜವಾಹರ್ ಲಾಲ್ ನೆಹರು ದೂರದೃಷ್ಟಿಯುಳ್ಳ ನಾಯಕ ದೇಶದ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದರು ಹಾಗು ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕಾರಣರಾದರು. ಸ್ಮೈಲ್ ಟ್ರಸ್ಟ್ ಆಡಳಿತ ಮಂಡಳಿ ನೆಕ್ಕುಂದಿ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತಿರುವುದು ಮೆಚ್ಚುವಂತಹ ವಿಷಯ. ಕ್ಷೇತ್ರದಲ್ಲಿ ಶಾಲೆ ಮತ್ತು ಅಂಗನವಾಡಿಗಳು ಸೇರಿ ಒಟ್ಟು 79 ಕಾಮಗಾರಿಗಳಿಗೆ ₹5 ಕೋಟಿ ಹಣ ಮಂಜೂರು ಮಾಡಲಾಗಿದೆ. ಅದ್ದರಲ್ಲಿ ಈ ಶಾಲೆಗೆ ₹5 ಲಕ್ಷ ಮಂಜೂರಾಗಿದ್ದು ಇತರೆ ಯಾವುದಾದರೂ ಯೋಜನೆಯಲ್ಲಿ ಇನ್ನೂ ₹5 ಲಕ್ಷ ಮಂಜೂರು ಮಾಡಿ ಒಟ್ಟು ₹10 ಲಕ್ಷ ವೆಚ್ಚದಲ್ಲಿ ಚಾವಣಿ, ಗೇಟ್, ಶೌಚಾಲಯಗಳನ್ನು ದುರಸ್ಥಿ ಮಾಡಲಾಗುವುದು ” ಎಂದು ತಿಳಿಸಿದರು.
ಸ್ಮೈಲ್ ಟ್ರಸ್ಟ್ ನ ಪದಾಧಿಕಾರಿಗಳಾದ ಡಾ.ಪ್ರಭಾವತಿ, ಎಸ್.ಎ.ಪಾರ್ಥ, ಶಶಿ, ಡಾ.ಅಜಯ್, ಅರುಣಕುಮಾರ್, ಕೆ.ಆರ್.ರವಿಕುಮಾರ್, ಡಾ.ಸಹನಾ, ಡಾ.ಉಷಾಮಂಜುನಾಥ್, ಎಂ.ಎ.ರವಿಕುಮಾರ್, ಕಾಗತಿ ವೆಂಕಟರತ್ನಂ, ಶರತ್, ಯುವಮುಖಂಡ ಅಮರ್, ಮುಖ್ಯ ಶಿಕ್ಷಕಿ ಪದ್ಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.