Bagepalli : ಬಾಗೇಪಲ್ಲಿ ಪಟ್ಟಣದಲ್ಲಿ ಶನಿವಾರ RSS ಪಥಸಂಚಲನ ಹಾಗೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಪಟ್ಟಣದ ಮುಖ್ಯರಸ್ತೆ ಒಳಗೊಂಡು ಡಾ.ಎಚ್.ಎನ್.ವೃತ್ತ ದಿಂದ ವಾಲ್ಮೀಕಿ ನಗರ, ಕುಂಬಾರಪೇಟೆ ರಸ್ತೆ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಪಥಸಂಚಲನ ನಡೆಸಿದರು.
ಸಮಾವೇಶದಲ್ಲಿ ಮಾತನಾಡಿದ ಅಖಿಲ ಭಾರತೀಯ ಬೌದ್ಧಿಕ ಸದಸ್ಯ ನ.ನಾಗರಾಜು, ” ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ RSS ನಿಂದ ದೇಶದಲ್ಲಿ ಉತ್ತಮ ಕೆಲಸಗಳನ್ನು ಮಾಡಲಾಗುತ್ತಿದೆ. ಯಾವುದೇ ಪ್ರತಿಫಲ ಅಪೇಕ್ಷಿಸದೆ ದೇಶಕ್ಕಾಗಿ ಸಾವಿರಾರು ಸ್ವಯಂಸೇವಕರು ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ RSS ಸಂಘಟನೆಯಲ್ಲಿ ಹಿಂದೂಗಳು ಮಾತ್ರವಲ್ಲದೆ ಎಲ್ಲ ಧರ್ಮದವರು ಸದಸ್ಯರಾಗಿ ದೇಶ ಸೇವೆ ಮಾಡುವ ಯುವಕರ ಸಂಖ್ಯೆ ಹೆಚ್ಚಾಗಬೇಕು.” ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಜಿಲ್ಲಾ ಕಾರ್ಯನಿರ್ವಾಹ ನಾಗರಾಜ್, ತಾಲ್ಲೂಕು ಕಾರ್ಯನಿರ್ವಾಹಕ ಎನ್.ಡಿ.ಗಣೇಶ್, ಸ್ವಯಂ ಸೇವಕ ಬಾ.ನಾ.ದತ್ತಾತ್ರೇಯ, ಜೆ.ಎನ್.ನಂಜಪ್ಪ, ಜಿಲ್ಲಾ ಪ್ರಚಾರಕ ವೀರೇಶ್, ವರುಣ್, ರಮೇಶ್, ದೇವರಾಜ್ ಪಥಸಂಚಲನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur