Chintamani : ಚಿಂತಾಮಣಿ ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದ ಸುತ್ತಮುತ್ತಲಿನ ಹಲವು ವರ್ಷಗಳಿಂದ ಬಾಡಿಗೆ ಪಾವತಿಸದ ಅಂಗಡಿ ಮಳಿಗೆಗಳಿಗೆ (locking up the shops) ಮಂಗಳವಾರ ಬೀಗ ಜಡಿದು ಜಿಲ್ಲಾ ಯುವಜನ ಸೇವಾ ಇಲಾಖೆಯ (District Youth Services Department) ಸಹಾಯಕ ನಿರ್ದೇಶಕ ವಿಜಯಕುಮಾರ್ ಕ್ರಮ ಕೈಗೊಂಡರು.
ಕ್ರೀಡಾಂಗಣದ ಸುತ್ತ 192 ಅಂಗಡಿಗಳಿವೆ. ಕೆಲವು ಅಂಗಡಿಗಳು ತಿಂಗಳಿಗೆ ₹1500 ಬಾಡಿಗೆ ನೀಡಬೇಕಿದ್ದರೆ, ಇನ್ನು ಕೆಲವು ಮಳಿಗೆಗಳು ₹1200 ಪಾವತಿಸಬೇಕಾಗುತ್ತದೆ. ಆದರೆ ಕೆಲವು ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಬಾಡಿಗೆ ಕಟ್ಟದೆ ಸುಮಾರು ₹ 60 ಲಕ್ಷ ಬಾಡಿಗೆ ಬಾಕಿ ಉಳಿದಿದೆ. ಪಾವತಿಸಲು ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡು ಎರಡು ನೋಟಿಸ್‌ಗಳನ್ನು ಸಹ ನೀಡಲಾಯಿತು ಆದರೂ ಹಣ ನೀಡದ ಕಾರಣ ಅಂಗಡಿಗೆ ಬೀಗ ಹಾಕದೆ ಬೇರೆ ದಾರಿ ಇರಲಿಲ್ಲ ಎಂದು ಸುದ್ದಿಗಾರರಿಗೆ ವಿಜಯಕುಮಾರ್ ತಿಳಿಸಿದರು.
ಕಳೆದ ಎರಡು ತಿಂಗಳ ಹಿಂದೆ ವಿಜಯಕುಮಾರ್ ಪ್ರತಿ ದಿನ ಅಂಗಡಿಗಳಿಗೆ ಭೇಟಿ ನೀಡಿ ₹12 ಲಕ್ಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.