Chintamani : ಚಿಂತಾಮಣಿ ತಾಲ್ಲೂಕು ವಕೀಲರ ಸಂಘದ (Lawyers Association) ಪದಾಧಿಕಾರಿಗಳ ಆಯ್ಕೆಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ (Election) ಅಧ್ಯಕ್ಷರಾಗಿ ನಾ.ಶಂಕರ್, ಉಪಾಧ್ಯಕ್ಷರಾಗಿ ಎನ್.ಕೆ.ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕಿರಣ್ ಕುಮಾರ್ ಆಯ್ಕೆಯಾಗಿದ್ದಾರೆ.
194 ಸದಸ್ಯರಿರುವ ವಕೀಲರ ಸಂಘದ ಚುನಾವಣೆಯಲ್ಲಿ 183 ಜನರು ಹಕ್ಕು ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾ.ಶಂಕರ್ 97, ಮಂಜುನಾಥ ರೆಡ್ಡಿ 46, ವೆಂಕಟರಾಮ ರೆಡ್ಡಿ 40 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎನ್.ಕೆ.ಪ್ರಸಾದ್ 107, ಎಂ.ರಾಮಚಂದ್ರಪ್ಪ 76 ಮತ ಗಳಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ.ಕಿರಣ್ ಕುಮಾರ್ 96, ವೆಂಕಟಶಿವಾ ರೆಡ್ಡಿ 65, ಪಿಳ್ಳೇಗೌಡ 20 ಮತ ಪಡೆದರು. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರೀದೇವಿ 119, ರಘುನಾಥ್ 63 ಮತ ಪಡೆದಿದ್ದರು.
ಖಜಾಂಚಿ ಸ್ಥಾನಕ್ಕೆ ಎನ್. ಕೃಷ್ಣಮೂರ್ತಿ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನ್ವರ್ ಖಾನ್, ಹರೀಶ್, ಬಿ.ವಜೀರ್, ಜಗನ್ನಾಥ ರೆಡ್ಡಿ, ಬಿ.ಎಸ್.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅಧ್ಯಕ್ಷ ನಾ.ಶಂಕರ್, ಪ್ರಾಮಾಣಿಕವಾಗಿ ವಕೀಲರ ಸಮಸ್ಯೆ ಪರಿಹರಿಸಲು ಶ್ರಮಿಸುತ್ತೇನೆ. ವಕೀಲರು ಸಮಾಜದ ಮುಖ್ಯವಾಹಿನಿಗೆ ಬಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಂಕು ಡೊಂಕುಗಳನ್ನು ದೂರ ಮಾಡಲು ಪ್ರಯತ್ನಿಸಬೇಕು ಎಂದರು.
ಹಿರಿಯ ವಕೀಲರಾದ ಸುರೇಶ್, ವೆಂಕಟಸುಬ್ಬಾರೆಡ್ಡಿ ಉಪಸ್ಥಿತರಿದ್ದರು.