Chintamani : ಆಟೊ ಚಾಲಕರು ನಗರ ಠಾಣೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಗುರುತಿನ ಚೀಟಿಯನ್ನು ಪಡೆಯುವಂತೆ ನಾನು ಕರ್ತವ್ಯಕ್ಕೆ ಹಾಜರಾಗಿದ್ದಾಗಿನಿಂದ ಹೇಳಲಾಗಿತ್ತು. ಆರಂಭದಲ್ಲಿ ಕೆಲವು ದಿನ ಸಮಯ ನೀಡುವಂತೆ ಸಂಘದಿಂದ ಮನವಿ ಮಾಡಿಕೊಂಡರು. ಅದರಂತೆಯೇ ೩ ತಿಂಗಳಲ್ಲಿ 600 ಆಟೋಗಳಿಗೆ 40 ಆಟೊಗಳಿಗೆ ಮಾತ್ರ ಠಾಣೆಯಿಂದ ಗುರುತಿನ ಚೀಟಿ ಮತ್ತು ನಂಬರ್ ಪಡೆಯಲಾಗಿದೆ. ಚಾಲಕರೊಂದಿಗೆ ಸೌಹಾರ್ದ ಸಂಬಂಧ ಮತ್ತು ಮಾನವೀಯ ದೃಷ್ಟಿಯಿಂದ ಸಮಯ ನೀಡಿದ್ದರೂ ಬಹಳಷ್ಟು ಆಟೋ ಚಾಲಕರು ಗುರುತಿನ ಚೀಟಿ ಮತ್ತು ನಂಬರ್ ಪಡೆದಿಲ್ಲ. ಒಂದು ವಾರದೊಳಗೆ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು, ಇಲ್ಲಾದಿದ್ದರೆ ದಾಖಲೆಗಳ ಪರಿಶೀಲನೆ ನಡೆಸಿ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು. ಆಗ ಸಂಘದ ಪದಾಧಿಕಾರಿಗಳು ತಲೆಹಾಕಬಾರದು’ ಎಂದು ಚಿಂತಾಮಣಿ ನಗರ ಠಾಣೆಯ ಇನ್ಸ್‌ಸ್ಪೆಕ್ಟರ್ ರಂಗಸ್ವಾಮಯ್ಯ ಎಚ್ಚರಿಕ್ಕೆ ನೀಡಿದರು.
ಅಪಘಾತಗಳಿಗೆ ಸಂಚಾರಿ ನಿಯಮಗಳ ಪಾಲನೆ ಮಾಡದಿರುವುದು ಕಾರಣವಾಗುತ್ತದೆ. ಆಟೋ ಚಾಲಕರು ಚಾಲನೆಯಲ್ಲಿರುವಾಗ ಸಮವಸ್ತ್ರ ಧರಿಸಿ, ವಾಹನದ ಆರ್.ಸಿ. ಚಾಲನಾ ಪರವಾನಗಿ, ವಿಮೆ ಮತ್ತಿತರ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಮದ್ಯಪಾನ ಮಾಡಿ, ಮೊಬೈಲ್‌ನಲ್ಲಿ ಮಾತನಾಡಿಕೊಂಡು ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.’ ಎಂದು ಅವರು ತಿಳಿಸಿದರು.
ಆಟೊ ಚಾಲಕರ ಸಂಘದ ಅಧ್ಯಕ್ಷ ವೆಂಕಟೇಶ್, ಪದಾಧಿಕಾರಿಗಳಾದ ಪಕೃದ್ಧೀನ್, ಮಧುಸೂಧನ್, ಮಂಜು, ಮಂಜುನಾಥ್ ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur