Home News Chikkaballapur ವೈನ್ ಸ್ಟೋರ್, ಕ್ಲಬ್, ಬಾರ್ ಗಳಿಗೆ FSSAI ನೋಂದಣಿ ಕಡ್ಡಾಯ

ವೈನ್ ಸ್ಟೋರ್, ಕ್ಲಬ್, ಬಾರ್ ಗಳಿಗೆ FSSAI ನೋಂದಣಿ ಕಡ್ಡಾಯ

0
Chikkaballapur Food Safety Advisory Committee Meeting

Chikkaballapur: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ (Deputy Commissioner P.N. Ravindra) ಅವರ ನೇತೃತ್ವದಲ್ಲಿ ಮಂಗಳವಾರ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ (Food Safety Advisory Committee Meeting) ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಆಹಾರ ಉದ್ದಿಮೆದಾರರನ್ನು ಒಂದೇ ಸೂರಿನಡಿಯಲ್ಲಿ ಪರಿವೀಕ್ಷಣೆ ಹಾಗೂ ನಿಬಂಧನೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಸೇವನೆಗೆ ಯೋಗ್ಯವಾದ ಆಹಾರ ಪೂರೈಕೆಗಾಗಿ ಅಧಿಕಾರಿಗಳು ನಿಗಾ ವಹಿಸಬೇಕು. ವಾರ್ಷಿಕ ₹12 ಲಕ್ಷದ ಒಳಗಿನ ಆಹಾರ ಉದ್ದಿಮೆದಾರರು ಎಫ್‌ಎಸ್‌ಎಸ್‌ಎಐ ನೋಂದಣಿ ಪಡೆಯಬೇಕು; ₹12 ಲಕ್ಷ ಮೇಲ್ಪಟ್ಟವರು ಪರವಾನಗಿ ಪಡೆಯುವುದು ಕಡ್ಡಾಯ. ಈ ನಿಯಮ ಉಲ್ಲಂಘಿಸಿದರೆ ₹10 ಲಕ್ಷದವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ ಶೇ.60 ರಷ್ಟು ಉದ್ದಿಮೆದಾರರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಉಳಿದ ಶೇ.40 ರಷ್ಟು ಉದ್ದಿಮೆದಾರರನ್ನು ಕೂಡಲೇ ನೋಂದಣಿಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಬೇಕರಿ, ತಿಂಡಿ ತಿನಿಸು ಉತ್ಪಾದನೆ, ಮಾರಾಟ ಮಳಿಗೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಿಸಿ, ನೋಂದಣಿ ಹಾಗೂ ಪರವಾನಗಿ ಪಡೆಯುವಂತೆ ಅರಿವು ಮೂಡಿಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿ ನಿಲಯಗಳ ಅಡುಗೆ ತಯಾರಕರಿಗೆ ಎಫ್‌ಎಸ್‌ಎಸ್‌ಎಐ ತರಬೇತಿ ಕಡ್ಡಾಯವಾಗಿದೆ” ಎಂದು ತಿಳಿಸಿದರು.


ನೋಂದಣಿ ಮತ್ತು ಪರವಾನಗಿ ಪಡೆಯಬೇಕಾದ ಆಹಾರ ಉದ್ದಿಮೆಗಳಲ್ಲಿ ಹಾಲಿನ ಡೇರಿಗಳು, ತಂಪು ಪಾನೀಯ ತಯಾರಿಕಾ ಘಟಕಗಳು, ವೈನ್ ಸ್ಟೋರ್, ಕ್ಲಬ್, ಬಾರ್, ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಧಾರ್ಮಿಕ ಸ್ಥಳಗಳ ಊಟ ವ್ಯವಸ್ಥೆ ಸಂಯೋಜಕರು, ಕೋಳಿ, ಮೀನು, ಮಾಂಸ ಮಾರಾಟಗಾರರು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಪ್ರಕಾಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version