Home News Chikkaballapur ಮೇ 27-28 ರಂದು 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮೇ 27-28 ರಂದು 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

0
10th Chikkaballapur District Kannada Sahitya Sammelana

Chikkaballapur : ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಮೇ 27 ಮತ್ತು 28 ರಂದು 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ (10th District Kannada Sahitya Sammelana) ನಡೆಯಲಿದೆ. ಈ ಕುರಿತು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಕೋಡಿ ರಂಗಪ್ಪ (District KaSaPa President Prof. Kodi Rangappa) ಮಾಹಿತಿ ನೀಡಿದರು.

27ರಂದು ಬೆಳಿಗ್ಗೆ ಧ್ವಜಾರೋಹಣ, ನಂತರ ಅಂಬೇಡ್ಕರ್ ಭವನದಿಂದ ಸಮ್ಮೇಳನಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ (Gopalagowda Kalvamanjali) ಅವರ ಮೆರವಣಿಗೆ ನಡೆಯಲಿದೆ. 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಸಾಪ ಪದಾಧಿಕಾರಿಗಳು, ಗಣ್ಯರು, ನಾಗರಿಕರು ಪಾಲ್ಗೊಳ್ಳಲಿದ್ದಾರೆ.

ಕನ್ನಡ ಭವನ ಲೋಕಾರ್ಪಣೆ ಮತ್ತು ಸಮ್ಮೇಳನ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕನ್ನಡ ಭವನ ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸದ ಡಾ. ಕೆ. ಸುಧಾಕರ್ ಸಮ್ಮೇಳನಾಧ್ಯಕ್ಷರ ಭಾಷಣ ಕೃತಿ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸಮ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ, ಸಂಗೀತ ನೃತ್ಯ ಸಂಜೆ, ‘ಮಹಾರಾತ್ರಿ’ ನಾಟಕ ಪ್ರದರ್ಶನ, ಡಾ. ರಾಜ್‌ಕುಮಾರ್ ಅವರ ಕೊಡುಗೆ ಕುರಿತು ಗೋಷ್ಠಿ, ಕೃಷಿ ಕ್ಷೇತ್ರದ ಸವಾಲುಗಳು, ಹೆಣ್ಣು ಮಕ್ಕಳ ಸ್ಥಿತಿಗತಿ ಮತ್ತು ಸಬಲೀಕರಣದ ಗೋಷ್ಠಿಗಳು ನಡೆಯಲಿವೆ.

ಸಮ್ಮೇಳನದ ನಿರ್ಣಯ ಮಂಡನೆ, ಸಾಧಕರಿಗೆ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಲಿಯ ಊಟ ವ್ಯವಸ್ಥೆ ಕಲ್ಯಾಣ ಮಂಟಪದಲ್ಲಿ ಉಚಿತವಾಗಿ ಮಾಡಲಾಗಿದೆ. ಹಲವು ಸಂಘ ಸಂಸ್ಥೆಗಳು, ಸರ್ಕಾರಿ ನೌಕರರು, ಗ್ರಾಮ ಪಂಚಾಯಿತಿ ಸದಸ್ಯರು ಸಮ್ಮೇಳನಕ್ಕೆ ಕೈಜೋಡಿಸಿದ್ದಾರೆ.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಎನ್. ಅಮೃತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಟಿ.ವಿ. ಚಂದ್ರಶೇಖರ್, ಸು.ಧಾ. ವೆಂಕಟೇಶ್, ಕೆ.ಎಂ. ರೆಡ್ಡಪ್ಪ, ರವಿಕುಮಾರ್, ಅಣ್ಣಮ್ಮ, ಚಲಪತಿಗೌಡ, ಸತೀಶ್, ಪಟೇಲ್ ನಾರಾಯಣಸ್ವಾಮಿ ಮತ್ತಿತರರು ಸಮ್ಮೇಳನದ ಸಿದ್ಧತೆಗಳಲ್ಲಿ ಭಾಗವಹಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version