Gauribidanur: ಗೌರಿಬಿದನೂರು ನಗರಸಭೆ ಸಭಾಂಗಣದಲ್ಲಿ ಮಂಗಳವಾರ 15ನೇ ಹಣಕಾಸು ಆಯೋಗ, ಎಸ್.ಎಫ್.ಸಿ, ಸ್ವಚ್ಛ ಭಾರತ್ ಮತ್ತು ಶಾಸಕರ ವಿಶೇಷ ಅನುದಾನದ ₹8 ಕೋಟಿ ಸೇರಿ ಕ್ರೋಢೀಕರಿಸಿ 2025-26ನೇ ಸಾಲಿನ ₹37 ಕೋಟಿ ಉಳಿತಾಯ ಬಜೆಟ್ (Municipal Budget) ಮಂಡಿಸಲಾಯಿತು.
ಬಜೆಟ್ ನಲ್ಲಿ ನಗರದಲ್ಲಿನ 31 ವಾರ್ಡ್‌ಗಳ ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಲಾಗಿದ್ದು ಇಂದಿರಾ ಕ್ಯಾಂಟೀನ್‌ನ ನಿರ್ವಹಣಾ ಅವ್ಯವಸ್ಥೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ (KH Puttaswamy Gowda) , ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಪೌರಾಯುಕ್ತೆ ಡಿ.ಎಂ. ಗೀತಾ, ಲೆಕ್ಕಪರಿಶೋಧಕ ಶ್ರೀಧರ್ ಹಾಗೂ ನಗರಸಭೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.